ಶ್ರೀರಾಮಾಂಜನೇಯ ಗೆಳೆಯರ ಬಳಗ (ರಿ) ಮೈರ ಇದರ 2ನೇ ವರ್ಷದ ತುಳುವೆರೆ ಕೂಟದ ಪ್ರಯುಕ್ತ ದಿನಾಂಕ 14-10-2017ರಂದು ನಡೆದ ಸತ್ಯ – ಧರ್ಮ ಸ್ನೇಹ ಕೂಟದ ಕಂಬಳದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಪಾಲ್ಗೊಂಡಿದ್ದರು.
ಶ್ರೀರಾಮಾಂಜನೇಯ ಗೆಳೆಯರ ಬಳಗ (ರಿ) ಮೈರ ಇದರ 2ನೇ ವರ್ಷದ ತುಳುವೆರೆ ಕೂಟದ ಪ್ರಯುಕ್ತ ದಿನಾಂಕ 14-10-2017ರಂದು ನಡೆದ ಸತ್ಯ – ಧರ್ಮ ಸ್ನೇಹ ಕೂಟದ ಕಂಬಳದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಪಾಲ್ಗೊಂಡಿದ್ದರು.
ಬಿ.ಎಂ.ಎಸ್ ಸಂಯೋಜಿತ ಆಟೋರಿಕ್ಷಾ ಚಾಲಕ-ಮಾಲಕರ ಸಂಘ ಬಂಟ್ವಾಳ ತಾಲೂಕು ಇದರ ವಾರ್ಷಿಕ ಮಹಾಸಭೆ ದಿನಾಂಕ 14-10-2017ರಂದು ಬಿ.ಸಿ ರೋಡಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ದ.ಕ ಜಿಲ್ಲೆಗೆ ಪ್ರತ್ಯೇಕ ವೈಜ್ಞಾನಿಕ ಮರಳು ನೀತಿ ಜಾರಿಗೊಳಿಸಬೇಕು, ಅತ್ಯಧಿಕ ಮರಳಿನ ದಕ್ಕೆಗಳು ಬಂಟ್ವಾಳದಲ್ಲಿ ಇರುವುದರಿಂದ ಬಂಟ್ವಾಳದ ಜನತೆಗೆ ಅತ್ಯಂತ ಕನಿಷ್ಠ ದರದಲ್ಲಿ ಮರಳು ಸಿಗಬೇಕು, ಕೇರಳ ಮತ್ತು ಅಂತರ್ ಜಿಲ್ಲೆಗೆ ಮರಳು ಸಾಗಾಟ ಸಂಪೂರ್ಣವಾಗಿ ನಿಷೇಧವಾಗಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ದಿನಾಂಕ 13-10-2017ರಂದು ಬಿ.ಸಿ ರೋಡಿನಲ್ಲಿ ನಡೆಯಿತು. ಪ್ರತಿಭಟನೆಯಲ್ಲಿ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಗೋ ಹತ್ಯೆ ಸಮಗ್ರ ಭಾರತದಲ್ಲಿ ನಿಷೇಧವಾಗಬೇಕು ಗೋವು ನಮ್ಮ ಧಾರ್ಮಿಕ ಭಾವನೆ,ಭಾರತೀಯ ಕೃಷಿ ಸಂಸ್ಕೃತಿಯ ಅಸ್ಮಿತೆ. ಋಷಿ ಪರಂಪರೆಯ ಜೀವಾಳ ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ, ಗೋಪರಿವಾರದ ನೇತೃತ್ವದಲ್ಲಿ ಆಭಯಾಕ್ಷರ ಆಂದೋಲನಕ್ಕೆ ಇಂದು ಬಿ.ಸಿರೊಡಿನ ರಕ್ತೇಶ್ವರಿ ದೇಗುಲದಲ್ಲಿ ಹಿರಿಯರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಾಲು ಉತ್ಪಾದಕರ ಸಹಕಾರಿ ಸಂಘ ಬೊಳಂತೂರು ಗ್ರಾಮದ ಸದಸ್ಯರು ದಿನಾಂಕ 10-10-2017ರಂದು ಒಡ್ಡೂರು ಫಾರ್ಮ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
ಬಿಜೆಪಿ ದ.ಕ ಜಿಲ್ಲೆ ವತಿಯಿಂದ ದಿನಾಂಕ 10-10-2017 ರಂದು ದೇಯಿ ಬೈದೇತಿ ವಿಗ್ರಹ ಅಪಮಾನ ಖಂಡಿಸಿ ಪುತ್ತೂರಿನಿಂದ ದೇಯಿಬೈದೆತಿ ಔಷಧವನದವರೆಗೆ ಬೃಹತ್ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಇದರಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹಾಗೂ ಇನ್ನೂ ಹಲವರು ಪಾಲ್ಗೊಂಡಿದ್ದರು.
ಪೊಳಲಿ ರಾಜರಾಜೇಶ್ವರಿ – ಕಟೀಲು ದುರ್ಗಾಪರಮೇಶ್ವರಿ – ಬಪ್ಪನಾಡು ದುರ್ಗಾಪರಮೇಶ್ವರಿ ಕರಾವಳಿಯ ಮೂರು ಪ್ರಸಿದ್ಧ ಧಾರ್ಮಿಕ ಕ್ಷೇತ್ರವನ್ನು ಜೋಡಿಸುವ ಕೇಂದ್ರದ ಮೋದಿ ಸರಕಾರದ ಮಹತ್ವದ ಯೋಜನೆ ಭಾರತ್ ಮಾಲಾ ಇದರಡಿಯಲ್ಲಿ ಚತುಷ್ಪಥ ರಸ್ತೆಯಾಗಿ ಮಾರ್ಪಾಡಾಗಲಿರುವ ಬಿ.ಸಿ ರೋಡ್ – ಪೊಳಲಿ – ಕಟೀಲು – ಮೂಲ್ಕಿ ಬಪ್ಪನಾಡು ರಸ್ತೆಯ ಸರ್ವೇ ಕಾರ್ಯಕ್ಕೆ ಸಂಸದ ನಳಿನ್ ಕುಮಾರ್ ಕಟೀಲುರವರು ಮೂಲ್ಕಿಯಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ರೈತ ಸಂಘ, ಮಾಣಿಲ ಸೇವಾ ಸಮಿತಿಯ ಸಹಭಾಗಿತ್ವದಲ್ಲಿ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳ ನಡೆ ಹಡೀಲು ಗದ್ದೆಯ ಕಡೆ ಕಾರ್ಯಕ್ರಮ ದಿನಾಂಕ 8-10-2017 ರಂದು ಬಿ.ಸಿ ರೋಡಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹಾಗೂ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿಜೆಪಿ ಸಜಿಪಮುನ್ನೂರು ಗ್ರಾಮ ಸಮಿತಿಯ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ದಿನಾಂಕ 8-10-2017 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಬಾಳ್ತಿಲ ಗ್ರಾಮ ಪಂಚಾಯತ್ ಸಮಿತಿಯಿಂದ ದಿನಾಂಕ 08-10-2017ರಂದು ಸ್ವಚ್ಛ ಭಾರತ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನೇತಾರ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.