ದಿನಾಂಕ 13-06-2017ರಂದು ಕಲ್ಲಡ್ಕದಲ್ಲಿ ನಡೆದ ಗಲಭೆ ವೇಳೆಯಲ್ಲಿ ಗಾಯಗೊಂಡಿದ್ದ ಪೊಲೀಸ್ ಪೇದೆ ಧನಂಜಯ್ ಮತ್ತು ಪವನ್ ಮೆಲ್ಕಾರ್ ಅವರನ್ನು ರಾಜೇಶ್ ನಾಯ್ಕ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.
ದಿನಾಂಕ 13-06-2017ರಂದು ಕಲ್ಲಡ್ಕದಲ್ಲಿ ನಡೆದ ಗಲಭೆ ವೇಳೆಯಲ್ಲಿ ಗಾಯಗೊಂಡಿದ್ದ ಪೊಲೀಸ್ ಪೇದೆ ಧನಂಜಯ್ ಮತ್ತು ಪವನ್ ಮೆಲ್ಕಾರ್ ಅವರನ್ನು ರಾಜೇಶ್ ನಾಯ್ಕ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.
ದಿನಾಂಕ 11-6-2017ರಂದು ಬಿ.ಮೂಡ ಗ್ರಾಮದಲ್ಲಿ ನಡೆದ ಬಿಜೆಪಿ ಬಿ.ಮೂಡ ಗ್ರಾಮದ ಸಮಿತಿ ಸಭೆಯಲ್ಲಿ ರಾಜೇಶ್ ನಾಯ್ಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪಾಲ್ಗೊಂಡಿದ್ದ ಸಭಿಕರನ್ನುದ್ದೇಶಿಸಿ ರಾಜೇಶ್ ನಾಯ್ಕ್ ಮಾತನಾಡಿದರು.
ಕೊಳ್ನಾಡು ಗ್ರಾಮದ ಪಕ್ಷದ ಕಾರ್ಯಕರ್ತರು ಅಪಘಾತದಲ್ಲಿ ಗಾಯಗೊಂಡಿದ್ದ ಕಾರಣ ದಿನಾಂಕ 10-6-2017ರಂದು ಸಂಸದ ಶ್ರೀ ನಳೀನ್ ಕುಮಾರ್ ಕಟೀಲ್ ಹಾಗೂ ರಾಜೇಶ್ ನಾಯ್ಕ್ ಕಾರ್ಯಕರ್ತರ ಮನೆಗೆ ಭೇಟಿ ನೀಡಿದರು.
ದಿನಾಂಕ 10-06-2017 ರಂದು ಕಳ್ಳಿಗೆ ಗ್ರಾಮದ ರವಿಂದ್ರ ಕಂಜತ್ತೂರು ಇವರ ಮನೆ ಮುಂಭಾಗದ ತಡೆಗೋಡೆ ಕುಸಿದಿದ್ದು ಅವರ ಮನೆಗೆ ರಾಜೇಶ್ ನಾಯ್ಕ್ ಭೇಟಿ ನೀಡಿದರು.
ದಿನಾಂಕ 10-06-2017ರಂದು ಬಿ.ಸಿ ರೋಡ್‍ನಲ್ಲಿ ನಡೆದ ‘Modi Fest’ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ರಾಜೇಶ ನಾಯ್ಕ್ ಮಾತನಾಡಿದರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಮರ್ದಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ರೈತರ ತಂಡ ಒಡ್ಡೂರು ಫಾರ್ಮ್ಸ್ ಗೆ ಭೇಟಿ ನೀಡಿ ಹೈನುಗಾರಿಕೆ ಹಾಗೂ ಕೃಷಿ ಬಗ್ಗೆ ಮಾಹಿತಿ ಪಡೆದರು.
ವಿಶ್ವ ಪರಿಸರ ದಿನದ ಪ್ರಯುಕ್ತ ಬಿ.ಸಿ ರೋಡಿನ ರಿಕ್ಷಾ ಭವನದಲ್ಲಿ 05-06-2017 ರಂದು Go Green Bantwal ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ್ ಅವರು ಪಾಲ್ಗೊಂಡು ಪರಿಸರವನ್ನು ಕಾಪಾಡುವ ಕುರಿತು ಮಾತುಗಳನ್ನಾಡಿದರು.
ವಿಶ್ವ ಪರಿಸರ ದಿನವಾದ ದಿನಾಂಕ 5-6-2017 ರಂದು ಮಂಗಳೂರಿನ ಉರ್ವ ಕೆನರಾ ಶಾಲೆ ಇಕೋ ಕ್ಲಬ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ್ ಅವರು ಪಾಲ್ಗೊಂಡಿದ್ದರು. ಶಾಲೆಯಲ್ಲಿನ ಮಕ್ಕಳಿಗೆ ಪರಿಸರದ ಕುರಿತು ಜಾಗೃತಿ ಮೂಡಿಸಿದರು.
ನಲಿಕೆಯವರ ಯುವ ವೇದಿಕೆ ಬಂಟ್ವಾಳ ತಾಲೂಕು ಇದರ ಪ್ರಥಮ ವಾರ್ಷಿಕೋತ್ಸವ, ಯುವ ಸಮಾವೇಶ ಹಾಗೂ ಸಾಂಸ್ಕೃತಿಕ ಕಾರ್ಯಕ್ರವು ದಿನಾಂಕ 4-6-2017 ರಂದು ನಡೆಯಿತು. ರಾಜೇಶ್ ನಾಯ್ಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಸನ್ಮಾನ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.
ರಾಯಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ದಿನಾಂಕ 4-6-2017 ರಂದು ರಾಜೇಶ್ ನಾಯ್ಕ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.