ದಿನಾಂಕ 27-06-2017ರಂದು ಕರ್ಪೆ ಗ್ರಾಮದಲ್ಲಿನ ಪಕ್ಷದ ವಿಸ್ತಾರಕರನ್ನು ರಾಜೇಶ್ ನಾಯ್ಕ್ ಭೇಟಿ ಮಾಡಿದರು.
ದಿನಾಂಕ 27-06-2017ರಂದು ಕರ್ಪೆ ಗ್ರಾಮದಲ್ಲಿನ ಪಕ್ಷದ ವಿಸ್ತಾರಕರನ್ನು ರಾಜೇಶ್ ನಾಯ್ಕ್ ಭೇಟಿ ಮಾಡಿದರು.
ಕರಿಯಂಗಳ ಗ್ರಾಮದಲ್ಲಿ ದಿನಾಂಕ 27-06-2017ರಂದು ನಡೆದ ಗ್ರಾಮ ಸಮಿತಿ ಸಭೆಯಲ್ಲಿ ಉಪಸ್ಥಿತರಿದ್ದ ಪಕ್ಷದ ವಿಸ್ತಾರಕರನ್ನುದ್ದೇಶಿಸಿ ರಾಜೇಶ್ ನಾಯ್ಕ್ ಮಾತನಾಡಿದರು ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಕ್ಷದ ವಿಸ್ತಾರಕರೊಂದಿಗೆ ರಾಜೇಶ ನಾಯ್ಕ್ ಪಾಲ್ಗೊಂಡಿದ್ದರು.
ಅಮ್ಮುಂಜೆ ನಿವಾಸಿ ಅಶ್ರಫ್ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಪೋಲೀಸ್ ಇಲಾಖೆ ಶೀಘ್ರವಾಗಿ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕಾಗಿ ಆಗ್ರಹಪಡಿಸುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಮತ್ತು ಬಂಟ್ವಾಳ ತಾಲೂಕಿನ ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕಾಗಿ ರಾಜೇಶ್ ನಾಯ್ಕ್ ವಿನಂತಿಸಿದ್ದಾರೆ.
ವಿಶ್ವಯೋಗ ದಿನದ ಆಚರಣೆ ಅಂಗವಾಗಿ ವೀರಕಂಭ ಗ್ರಾಮದ ಶಾರದಾಂಭ ಭಜನಾ ಮಂದಿರದಲ್ಲಿ ದಿನಾಂಕ 21-06-2017ರಂದು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಹಾಗೂ ದ.ಕ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಯೋಗಾಭ್ಯಾಸ ನಡೆಯಿತು. ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಬಡಗಬೆಳ್ಳೂರು, ಸಂಗಬೆಟ್ಟು ಮತ್ತು ಇರ್ವತ್ತೂರು ಗ್ರಾಮಗಳಲ್ಲಿ ಪಕ್ಷದ ವಿಸ್ತಾರಕರನ್ನು ರಾಜೇಶ್ ನಾಯ್ಕ್ ಭೇಟಿ ಮಾಡಿದರು.
ಕಳೆದ 4 ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರಕಾರವು ಅಧಿಕಾರಿಗಳ ಮೇಲೆ ದಬ್ಬಾಳಿಕೆ,ಕಿರುಕುಳ ಮತ್ತು ಒತ್ತಡಗಳಿಂದ ಅಧಿಕಾರಿಗಳು ನ್ಯಾಯಸಮ್ಮತವಾಗಿ ಕೆಲಸಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣ ಮಾಡಿದೆ ಸರಕಾರದ ಕಾರ್‍ಯವೈಖರಿಯಿಂದ ಪೋಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಈ ಸರಕಾರದ ಅಡಿಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವಂತಹ ಸಂಶಯ ಜನರ ಮನಸ್ಸಿನಲ್ಲಿ ಇರುವಾಗಲೇ ಇದಕ್ಕೆ ಪುಷ್ಟಿ ಕೊಡುವ ಘಟನೆ ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈಯವರು ಜಿಲ್ಲಾ ಪೋಲೀಸ್ […]
ಡಾ.ಪ್ರಭಾಕರ್ ಭಟ್ ಕಲ್ಲಡ್ಕರವರನ್ನು ಬಂಧಿಸಿ 307 ಕೇಸು ದಾಖಲಿಸಿ ಎಂಬುದಾಗಿ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಒತ್ತಡವನ್ನು ಹೇರಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಕ್ಷಣ ರಾಜಿನಾಮೆ ನೀಡಬೇಕೆಂದು ಬಿಜೆಪಿ ಪ್ರಮುಖರಾದ ರಾಜೇಶ್ ನಾಕ್ ಉಳಿಪ್ಪಾಡಿ ಒತ್ತಾಯಸಿದ್ದಾರೆ. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಅಧಿಕಾರಿಗಳನ್ನು ಬಳಸಿ ಕಾರ್‍ಯಕರ್ತರನ್ನು ಸಂಘಟನೆಯ ಪ್ರಮುಖರನ್ನು ಧಮನಿಸುವ ಸಚಿವರ ಈ ಕಾರ್‍ಯಕ್ಕೆ ಜಿಲ್ಲೆಯ ಜನತೆ ಸೂಕ್ತ ಉತ್ತರ ನೀಡುವ ಕಾಲ ದೂರವಿಲ್ಲ ಎಂಬುದಾಗಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಪ್ರತಿಕ್ರಿಯೆ ನೀಡಿರುತ್ತಾರೆ ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ […]
ದಿನಾಂಕ 19-06-2017 ರಂದು ಕಲ್ಲಡ್ಕದ ಶ್ರೀರಾಮ ಮಂದಿರದಲ್ಲಿ ನಡೆದ ಹನುಮಾನ್ ಪ್ರತಿಷ್ಠಾಪನೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ, ರಾಜೇಶ್ ನಾಯ್ಕ್ ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರನ್ನು ಬಂಧಿಸುವಂತೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮೇಲೆ ಒತ್ತಡ ಹೇರಿ ಅಧಿಕಾರ ದುರುಪಯೋಗಪಡಿಸಿದ ಸಚಿವರ ರಾಜಿನಾಮೆಗೆ ಒತ್ತಾಯಿಸಿ ದಿನಾಂಕ 18-06-2017 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ವಿಕಾಸ ಸಮಿತಿ ಕಡೇಶ್ವಾಲ್ಯ ಇದರ ವತಿಯಿಂದ ನಡೆದ ಉಚಿತ ಪುಸ್ತಕ ಹಾಗೂ ವಿದ್ಯಾನಿಧಿ ವಿತರಣೆ ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ್ ಪಾಲ್ಗೊಂಡಿದ್ದರು.