ಶಾರದೋತ್ಸವ ಸಮಿತಿ ಮಾವಿನಕಟ್ಟೆ,ಮಣಿನಾಲ್ಕೂರು ಇದರ ಶಾರದ ಪೂಜಾ ಮಹೋತ್ಸವದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಾರದೋತ್ಸವ ಸಮಿತಿ ಮಾವಿನಕಟ್ಟೆ,ಮಣಿನಾಲ್ಕೂರು ಇದರ ಶಾರದ ಪೂಜಾ ಮಹೋತ್ಸವದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲದ ನವರಾತ್ರಿ ಉತ್ಸವದಲ್ಲಿ ಬಿಜೆಪಿ ನೇತಾರ ರಾಜೇಶ್ ನಾಯ್ಕ್ ಪಾಲ್ಗೊಂಡು ದೇವಿಯ ಆಶೀರ್ವಾದಕ್ಕೆ ಪಾತ್ರರಾದರು.
ಪಾಣೆಮಂಗಳೂರು ಅನಂತ ಜೈನ ಚೈತ್ಯಾಲಯದಲ್ಲಿ ಚಾರ್ತುಮಾಸ ವ್ರತಾಚರಣೆಯ ಅಂಗವಾಗಿ 108 ಮುನಿಶ್ರೀ ವೀರ ಸಾಗರ ಮಹಾರಾಜ ಸ್ವಾಮಿಗಳ ಆಶೀರ್ವಚನ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಪಾಲ್ಗೊಂಡು ಮಹಾರಾಜರ ಆಶೀರ್ವಾದ ಪಡೆದರು.
ಬಿ.ಕಸ್ಬಾ ಗ್ರಾಮದ ಸರ್ವಮಂಗಳ ಎಂಬುವವರು ಅಸೌಖ್ಯದಿಂದ ಬಳಲುತ್ತಿದ್ದು, ಬಿಜೆಪಿ ನೇತಾರ ರಾಜೇಶ್ ನಾಯ್ಕ್ ಅವರು ಅವರ ಮನೆಗೆ ಭೇಟಿ ನೀಡಿ ಸರ್ವಮಂಗಳ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.
ಶ್ರೀ ದೇವಿ ಯುವಕ ಮಂಡಲ (ರಿ) ನರಿಕೊಂಬು ಇದರ ಆಶ್ರಯದಲ್ಲಿ ನೇತ್ರದಾನ ಶಿಬಿರ ದಿನಾಂಕ 25-09-2017ರಂದು ನಡೆಯಿತು ಈ ಸಂದರ್ಭದಲ್ಲಿ ಯುವಕ ಮಂಡಲದ ಸದಸ್ಯರೊಂದಿಗೆ ಬಿಜೆಪಿ ನೇತಾರ ರಾಜೇಶ್ ನಾಯ್ಕ್ ಪಾಲ್ಗೊಂಡಿದ್ದರು.
ಬಿಜೆಪಿ ಗೋಳ್ತಮಜಲು ಶಕ್ತಿಕೇಂದ್ರದ ಸಭೆ ದಿನಾಂಕ 24-09-2017 ರಂದು ನಡೆಯಿತು. ಸಭೆಯಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು .
ಬಿಜೆಪಿ ಪಂಜಿಕಲ್ಲು ಗ್ರಾಮಪಂಚಾಯತ್ ಮಟ್ಟದ ಪ್ರಮುಖ ಕಾರ್ಯಕರ್ತರ ಸಭೆ ದಿನಾಂಕ 24-09-2017 ರಂದು ನಡೆಯಿತು. ಸಭೆಯಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಪಸ್ಥಿತ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಮೂಡ ಮತ್ತು ಸಾಲೆತ್ತೂರು ಗ್ರಾಮದ ಸದಸ್ಯರು ಒಡ್ಡೂರು ಫಾರ್ಮ್ಸ್ ಗೆ ಭೇಟಿ ನೀಡಿ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ಪಡೆದರು.
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಮದ್ಯಾಹ್ನದ ಬಿಸಿಯೂಟದ ಅನುದಾನವನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿ ಬಡಮಕ್ಕಳ ಅನ್ನಕ್ಕೆ ಕನ್ನ ಹಾಕಿದ್ದು ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಪ್ರತಿ ಮನೆಯಿಂದ ಭೋಜನ ಹಾಗೂ ವಸ್ತ್ರದಾನಕ್ಕೆ ಸಹಕಾರ ಸಿಗಬೇಕೆಂಬ ದೃಷ್ಟಿಯಿಂದ ಅನ್ನದಾಸೋಹ ಯೋಜನೆಗೆ ಇಂದು ಬಿ.ಸಿ ರೋಡಿನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಗೋ ಹತ್ಯೆ ಸಮಗ್ರ ಭಾರತದಲ್ಲಿ ನಿಷೇಧವಾಗಬೇಕು. ಗೋವು ನಮ್ಮ ಧಾರ್ಮಿಕ ಭಾವನೆ, ಭಾರತೀಯ ಕೃಷಿ ಸಂಸ್ಕೃತಿಯ ಅಸ್ಮಿತೆ. ಋಷಿ ಪರಂಪರೆಯ ಜೀವಾಳ ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ, ಗೋ ಪರಿವಾರದ ನೇತೃತ್ವದಲ್ಲಿ ಅಭಯಾಕ್ಷರ ಆಂದೋಲನಕ್ಕೆ ಇಂದು ಹಿಂದೂ ಸಮಾಜದ ಪೂಜ್ಯ ಸಂತರುಗಳಿಂದ ಒಡ್ಡೂರು ಫಾರ್ಮ್ಸ್ ನಲ್ಲಿ ಚಾಲನೆ ನೀಡಲಾಯಿತು.