Rajesh Naik

ಪ್ರಕೃತಿ ವಿಕೋಪ ಪರಿಹಾರಧನ, ರಾಷ್ಟ್ರೀಯ ಸಹಾಯಧನ ಚೆಕ್ ವಿತರಣೆ

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಕೃತಿ ವಿಕೋಪ ಪರಿಹಾರಧನ, ರಾಷ್ಟ್ರೀಯ ಸಹಾಯಧನ ಸೇರಿದಂತೆ 140ಕ್ಕೂ ಮಿಕ್ಕಿದ ಚೆಕ್ ನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು, ಸಂಸದ ನಳಿನ್ ಕುಮಾರ್ ಕಟೀಲುರವರ ಉಪಸ್ಥಿತಿಯಲ್ಲಿ ವಿತರಿಸಿದರು ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಪುರಂದರ ಹೆಗ್ಡೆ, ಜಿ.ಪಂ ಸದಸ್ಯರುಗಳಾದ ತುಂಗಪ್ಪ ಬಂಗೇರಾ, ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Read More

ವಕ್ಫ್ ಆಸ್ತಿ ಕಬಳಿಕೆ ಕುರಿತ ಅನ್ವರ್ ಮಾಣಿಪ್ಪಾಡಿ ವರದಿ ಜಾರಿಗೆ ಆಗ್ರಹಿಸಿ ವಿಧಾನಸೌಧದ ಎದುರು ಪ್ರತಿಭಟನೆ

ವಕ್ಫ್ ಆಸ್ತಿಯಲ್ಲಿ ಅಕ್ರಮ ನಡೆದ ಬಗೆಗಿನ ಅನ್ವರ್ ಮಾಣಿಪ್ಪಾಡಿ (ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ) ವರದಿಯನ್ನು ಮಂಡನೆಗೊಳಿಸುವಂತೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಅನ್ವರ್ ಮಾಣಿಪ್ಪಾಡಿ, ಸಿ.ಟಿ. ರವಿ, ಸುರೇಶ್ ಕುಮಾರ್,  ಆಯನೂರು ಮಂಜುನಾಥ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ, ಕೋಟ ಶ್ರೀನಿವಾಸ್ ಪೂಜಾರಿ ಸೇರಿದಂತೆ ಮತ್ತಿನ್ನಿತರರು ಉಪಸ್ಥಿತರಿದ್ದರು.

Read More

ಅಡಿಕೆ ಕೊಳೆ ರೋಗ ಪರಿಹಾರ ನೀಡಲು ಮುಖ್ಯಮಂತ್ರಿ ಭರವಸೆ :ರಾಜೇಶ್ ನಾಯ್ಕ್

ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದಕಾರಣ ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆ ಕೃಷಿಯು ಕೊಳೆ ರೋಗ ಪೀಡಿತವಾಗಿದ್ದು ಬೆಳೆ ಸಂಪೂರ್ಣವಾಗಿ ನಾಶವಾಗಿರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದು ಇದಕ್ಕೆ ಸ್ಪಂಧಿಸಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಹೆಚ್ಚಿನ ಪರಿಹಾರಕ್ಕಾಗಿ ಮಾನ್ಯ ಮುಖ್ಯಮಂತ್ರಿಯವರನ್ನು ಖುದ್ದು ಭೇಟಿಯಾಗಿ ಮನವಿ ಮಾಡಿ ಸಂಬಂದಪಟ್ಟ ತೋಟಗಾರಿಕಾ ಇಲಾಖೆಯಿಂದ ಸಮಿಕ್ಷೆ ಮಾಡಲುರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಮಾತ್ರವಲ್ಲದೆ ಜಿಲ್ಲಾಧಿಕಾರಿಯವರಿಗೆ ಅಡಿಕೆ ಕೊಳೆರೋಗದಿಂದ ನಷ್ಟಕ್ಕೀಡಾದ ಕೃಷಿಕರಿಗೆ ಮಳೆಹಾನಿ ಪರಿಹಾರ ನಿಧಿಯಿಂದಲೂ ನಷ್ಟ ಪರಿಹಾರಒದಗಿಸುವಂತೆ ಮನವಿ ಮಾಡಿದ್ದಾರೆ. ಮನವಿಗೆ […]

Read More

ಸಿದ್ದಕಟ್ಟೆ ರಾಷ್ಟ್ರೀಯ ಸೇವಾ ಯೋಜನೆ: ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಕಟ್ಟೆ ರಾಷ್ಟ್ರೀಯ ಸೇವಾ ಯೋಜನೆ ಇದರ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾಯಕತ್ವ ಗುಣವನ್ನು ಮತ್ತು ಶಿಸ್ತಿನ ಜೀವನಕ್ಕಾಗಿ ವಿದ್ಯಾರ್ಥಿ ಸಂಘ ಸಹಾಯಕ ವಾಗುತ್ತದೆ ಎಂದು ಹೇಳಿದರು. ಎಲ್ಲಾ ಮಕ್ಕಳ ಜೊತೆ ಸೇರಿಕೊಂಡು ಮಕ್ಕಳಿಗೆ ಜೀವನ ಸ್ಥೈರ್ಯ ಕೊಡುವ ಕೆಲಸಾಡಬೇಕು. ವಿದ್ಯಾರ್ಥಿ ಸಂಘದ ಮೂಲಕ ರಾಜಕೀಯ ಪ್ರವೇಶ ಮಾಡುವ ಮೂಲಕ ಇಂದಿನ ದಿನಗಳಲ್ಲಿ ಕಾಣುತ್ತಿದ್ದೇವೆ, […]

Read More

ಸಕಲ ಸರ್ಕಾರಿ ಸೌಲಭ್ಯ ಅಯಾಯ ಗ್ರಾ.ಪಂ.ನಲ್ಲೇ ಲಭ್ಯ : ರಾಜೇಶ್ ನಾಯ್ಕ್

ಬಂಟ್ವಾಳ: ಗ್ರಾಮದ ಅಭಿವೃದ್ಧಿಯಿಂದ ಮಾತ್ರ ಈ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಹೇಳಿದರು . ಅವರು ಸಂಗಬೆಟ್ಟು ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಮೊದಲ ಬಾರಿಗೆ ಸಂಗಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಬಾಪೂಜಿ ಸೇವಾ ಕೇಂದ್ರಕ್ಕೆ ಅಧಿಕ್ರತ ಚಾಲನೆಯನ್ನು ನೀಡಿ ಬಳಿಕ ಗಾಂಧಿ ಗ್ರಾಮ ಪುರಸ್ಕಾರ , ಸೋಲಾರ್ ದಾರಿ ದೀಪ ಉದ್ಘಾಟಿಸಿ ಮಾತನಾಡಿದರು. ಗ್ರಾಮಾಭಿವ್ರದ್ದಿಯೇ ಗಾಂಧೀಜಿಯವರ ಕನಸಾಗಿತ್ತು. ಜನಪ್ರತಿನಿಧಿಗಳಿಂದ […]

Read More

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕರು

ರಾಜ್ಯ ಸಾರಿಗೆ ಸಂಸ್ಥೆಯಿಂದ ಮಂಗಳೂರು-ಉಪ್ಪಿನಂಗಡಿ ಮಾರ್ಗವಾಗಿ ಹೆಚ್ಚುವರಿ ಬಸ್ಸನ್ನು ಒದಗಿಸುವ ಬಗ್ಗೆ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವಿದ್ಯಾರ್ಥಿಗಳು ಶಾಸಕಾರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಶಾಲಾಮಕ್ಕಳ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವಂತೆ ಸೂಚಿಸಿದರು. ಇದಕ್ಕೆ ಸ್ಪಂದಿಸಿದ ಇಲಾಖಾಧಿಕಾರಿಗಳು ಶೀಘ್ರ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

Read More

ಪಲ್ಲಮಜಲ್ ಪುರಸಭೆ ಚುನಾವಣೆ: ಪುಷ್ಪರಾಜ್ ಶೆಟ್ಟಿಯವರ ಪರವಾಗಿ ಮತಯಾಚನೆ

ಪುರಸಭೆ ಚುನಾವಣೆ ಪಲ್ಲಮಜಲ್ 21 ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಪುಷ್ಪರಾಜ್ ಶೆಟ್ಟಿಯವರ ಪರವಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮತಯಾಚನೆ ನಡೆಸಿದರು ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್‍ಯಕರ್ತರಾದ ಹರೀಶ್, ಶೇಖರ್ ಪೂಜಾರಿ, ಉಮೇಶ್, ಲಕ್ಷ್ಮಣ ಸಫಲ್ಯ, ಉಮೇಶ್ ಪೂಜಾರಿ, ಹರೀಶ್ ಸಫಲ್ಯ, ಸತ್ತಾರ್, ಹರೀಶ್‌ ಟೈಲರ್, ಶಿವರಾಮ್, ದೇವದಾಸ್, ವಿನೋದ, ಗೋಪಾಲ್‌ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Read More

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಭೆ

ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ ರೋಡಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಾತನಾಡಿಅಟಲ್‌ಜಿಯವರು ಪಕ್ಷವನ್ನು ಬೆಳೆಸುವುದರೊಂದಿಗೆ ರಾಮರಾಜ್ಯ ನಿರ್ಮಾಣದಕನಸನ್ನು ನಮ್ಮಲ್ಲಿ ಬಿತ್ತಿದರು. ಅವರ ಪ್ರೇರಣೆಯಿಂದಲೇ ಇಂದು ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಎಂದರು. ಅವರ ಆಡಳಿತ ಕಾಲದಲ್ಲಿ ಭಾರತ ವಿಶ್ವ ಮಾನ್ಯತೆ ಪಡೆದಿದ್ದು ಪೋಖ್ರಾನ್‌ ಅಣು ಪರಿಕ್ಷೆಯ ಮೂಲಕ ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದರು. ಗ್ರಾಮಗಳ ಅಭಿವೃದ್ಧಿಗೆಒತ್ತು […]

Read More

ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಸಮುದಾಯಭವನ ಅವರಣಗೋಡೆ ಕುಸಿತ: ಶಾಸಕರ ಭೇಟಿ

ಬಂಟ್ವಾಳ: ಇಲ್ಲಿನ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಸಮುದಾಯಭವನ ಅವರಣಗೋಡೆ ಕುಸಿತಗೊಂಡ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಶೀಘ್ರವಾಗಿ ಸರಕಾರದ ಅನುದಾನ ಬಳಸಿ ತಡೆಗೋಡೆ ಪುನರ್ನಿರ್ಮಾಣ ಕಾರ್ಯ ಮಾಡುವಂತೆ ಭರವಸೆಯನ್ನು ನೀಡಿದರು.  ಈ ಸಂದರ್ಭದಲ್ಲಿ ಪ್ರಮುಖರಾದ ಹರಿಕ್ರಷ್ಣ ಬಂಟ್ವಾಳ, ಸಂಜೀವ ಪೂಜಾರಿ,‌ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Read More

Back To Top
Highslide for Wordpress Plugin