Rajesh Naik

ಬಿ.ಮೂಡ: ಪ್ರಾಕೃತಿಕ ವಿಕೋಪದ ಪರಿಹಾರ ನಿಧಿಯ ಚೆಕ್‌ ವಿತರಣೆ

ಬಿ.ಮೂಡ ಗ್ರಾಮದ ಪ್ರಾಕೃತಿಕ ವಿಕೋಪದ ಪರಿಹಾರ ನಿಧಿಯ ಚೆಕ್‌ನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಸಂತ್ರಸ್ತರಿಗೆ ಇಂದು ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಪುರಸಭೆ ಸದಸ್ಯರಾದ ಗೋವಿಂದ ಪ್ರಭು, ಜಿ.ಆನಂದ, ರೋನಾಲ್ಡ್ ಡಿಸೋಜ ಉಪಸ್ಥಿತರಿದ್ದರು.

Read More

ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಮತ್ತು ಜೇಸಿಯ ಸಮಾಜಮುಖಿ ಕಾರ್ಯ ಶ್ಲಾಘನೀಯ

ಬಂಟ್ವಾಳ: ಹದಿನೈದು ದಿನಗಳ ಹಿಂದೆ ಕಸದ ಕೊಂಪೆಯಾಗಿದ್ದು ಬೀಳುವ ಸ್ಥಿತಿಯಲ್ಲಿದ್ದ ಪುರಸಭೆಯ ಬಂಟ್ವಾಳ ಬಡ್ಡಕಟ್ಟೆ ಬಸ್ ತಂಗುದಾಣಕ್ಕೀಗ ಜೀವಕಳೆ ಬಂದಿದೆ. ಬಸ್ಸುಗಳು ತಂಗುದಾಣದ ಎದುರೇ ಬಂದು ನಿಲ್ಲುತ್ತಿದ್ದು, ಪ್ರಯಾಣಿಕರು ಅಲ್ಲಿಯೇ ಹತ್ತುವಷ್ಟರ ಮಟ್ಟಿಗೆ ಈ ಭಾಗ ಬಸ್ ಮತ್ತು ಪ್ರಯಾಣಿಕರ ಉಪಯೋಗಕ್ಕೆ ಲಭಿಸಿದೆ. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪುರಸಭೆ ಅಲ್ಲಲ್ಲಿ ನಡೆಸುತ್ತಿದ್ದ ಸ್ವಚ್ಛತಾ ಕಾರ್ಯಕ್ರಮದ ಸಂದರ್ಭ ಬಡ್ಡಕಟ್ಟೆಯಲ್ಲಿ ನಡೆಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜೇಸಿ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ […]

Read More

ಮಂಚಿ ಗ್ರಾ.ಪಂ : 94ಸಿ ಹಕ್ಕುಪತ್ರ ವಿತರಣೆ

ಕರ್ನಾಟಕ ಸರಕಾರದ ಕಂದಾಯ ಇಲಾಖೆ ಹಾಗು ಮಂಚಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ 94ಸಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಮಂಚಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದಿನಾಂಕ : 06-10-2018, ಶನಿವಾರ ನಡೆಯಿತು. ಬಂಟ್ವಾಳ ಶಾಸಕರಾದ ಮಾನ್ಯ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಕಾರ್ಯಕ್ರಮ ಉದ್ಪಾಟಿಸಿ ಹಕ್ಕುಪತ್ರ ವಿತರಿಸಿ ಮಾತನಾಡುತ್ತಾ ಗ್ರಾಮದ ಏಳಿಗೆಗಾಗಿ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು ಹಾಗೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ನೆಮ್ಮದಿಯಿಂದ ಬದುಕುವಂತಾಗಳು ಸರಕಾರದ ಸವಲತ್ತುಗಳು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಸಹಕಾರಿಸಬೇಕೆಂದು ಕರೆ ನೀಡಿದರು. ಪಂಚಾಯತ್ ಅಧ್ಯಕ್ಷೆ ಶ್ರೀಮತಿ […]

Read More

ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ, ಪುರಸಭೆ ಬಂಟ್ವಾಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವಜನ ಒಕ್ಕೂಟ ( ರಿ.) ಬಂಟ್ವಾಳ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬಂಟ್ವಾಳ, ಎಸ್.ವಿ.ಎಸ್ ದೇವಳ ವಿದ್ಯಾಸಂಸ್ಥೆ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ಕಾರ್ಯಕ್ರಮ ಎಸ್.ವಿ.ಎಸ್ ದೇವಳ ಕ್ರೀಡಾಂಗಣ ಬಂಟ್ವಾಳ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಕ್ರೀಡೆಯಿಂದ ಮಾನಸಿಕವಾಗಿ ದೈಹಿಕವಾಗಿ ಬೆಳೆಯುವ ಆರೋಗ್ಯದ ಮೇಲೆ ಪ್ರಭಾವ […]

Read More

ಸಮಾಜದ ಕಟ್ಟಕಡೆಯ ವ್ಯಕ್ತಿಯು ಗೌರವ, ನೆಮ್ಮದಿಯಿಂದ ಬದುಕು ಸಾಗಿಸುವಂತಾಗಲಿ- ರಾಜೇಶ್ ನಾಯ್ಕ್

ಕೊಳ್ನಾಡು-ಸಾಲೆತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಹಾಗೂ ಕೊಳ್ನಾಡು ಗ್ರಾಮ ಪಂಚಾಯತ್ ಆಶ್ರಯದಲ್ಲಿ 94ಸಿ ಹಾಗೂ ವಿವಿಧ ಸವಲತ್ತುಗಳನ್ನು ಶಾಸಕ ರಾಜೇಶ್ ನಾಯ್ಕ್ ವಿತರಿಸಿದರು. ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡು ದಾಖಲಾತಿ ಇಲ್ಲದ ವಿಚಾರವನ್ನು ಮನಗೊಂಡು ನಮ್ಮ ಅಂದಿನ ಬಿ.ಜೆ.ಪಿ ಸರಕಾರ ತಂದಿರುವ 94ಸಿ ಯೋಜನೆಯಿಂದ ಅನೇಕರಿಗೆ ಮನೆಯ ಅಡಿಸ್ಥಳದ ದಾಖಲೆ ಸಿಕ್ಕಿರುವುದು ಅಮೃತ ಸಿಕ್ಕಂತಾಗಿದೆ. ಇಂತಹ ಜನಪರ ಯೋಜನೆಗಳು ಇನ್ನಷ್ಟು ಜಾರಿಗೊಳ್ಳಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯು ನೆಮ್ಮದಿಯಿಂದ ಗೌರವದಿಂದ ಬದುಕು ಸಾಗಿಸುವಂತಾಗಲಿ. ಎಂದು ಶುಭ ಹಾರೈಸಿ […]

Read More

ಬಿ.ಮೂಡ ಕಾಲೇಜು ಅಭಿವೃದ್ಧಿ ನೂತನ ಸಮಿತಿಯ ಪದಗ್ರಹಣ ಸಮಾರಂಭ

ಸರಕಾರಿ ಪದವಿಪೂರ್ವ ಕಾಲೇಜು ಗೂಡಿನಬಳಿ, ಬಿ.ಮೂಡ ಕಾಲೇಜು ಅಭಿವೃದ್ಧಿ ನೂತನ ಸಮಿತಿಯ ಪದಗ್ರಹಣ ಸಮಾರಂಭ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಶಾಸಕರು ಕಾಲೇಜಿನ ಸಮಗ್ರ ಅಭಿವೃದ್ಧಿಗೆ ನೂತನ ಸಮಿತಿಯ ಪಧಾದಿಕಾರಿಗಳನ್ನು ಮತ್ತು ಸದಸ್ಯರನ್ನು ಅಭಿನಂದಿಸಿ ಕಾಲೇಜಿನ ಅಭಿವೃದ್ದಿಗೆ ಶ್ರಮಿಸಬೇಕಾಗಿ ಕರೆ ನೀಡಿದರು. ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ರಜನಿ ಚಿಕ್ಕಯ್ಯಮಠ, ಪೋಷಕ ವರ್ಗದ ಸದಸ್ಯರು ಬಿ.ಮೊಹಮ್ಮದ್, ಮಲ್ಲೇಶ್ವರ ಹೆಚ್, ಶ್ರೀಮತಿ ಸುಜಾತ ಲೆಕ್ಕಿಸಿರಿಪಾದೆ, ಶ್ರೀಮತಿ ಯಶೋಧ, ಪ್ರಾಂಶುಪಾಲರಾದ ಯೂಸೂಫ್, ಉಪನ್ಯಾಸಕರಾದ […]

Read More

ಬಿಜೆಪಿ ಯುವಮೋರ್ಚಾ ಬಂಟ್ವಾಳದ ವತಿಯಿಂದ ಶಾಸಕರಿಗೆ ಅಭಿನಂದನೆ

ಬಿಜೆಪಿ ಯುವಮೋರ್ಚಾ ಬಂಟ್ವಾಳದ ವತಿಯಿಂದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್‌ರವರನ್ನು ಉಳಿಪ್ಪಾಡಿ ಮನೆಯಲ್ಲಿ ಯುವಮೋರ್ಚಾ ಅದ್ಯಕ್ಷ ವಜ್ರನಾಥ ಕಲ್ಲಡ್ಕರವರ ನೇತೃತ್ವದಲ್ಲಿ ಭೇಟಿಮಾಡಿ ಬೆಳ್ಳಿಯ ಭಾವಚಿತ್ರ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಯುವಮೋರ್ಚಾದ ಸಲಹೆಗಳನ್ನು ತಿಳಿಸಿ ಅನುಷ್ಠಾನಕ್ಕೆ ಮುತುವರ್ಜಿ ವಹಿಸುವ ಬಗ್ಗೆ ಭರವಸೆ ನೀಡಿದರು. ಸ್ಥಳದಲ್ಲಿ ಕ್ಷೇತ್ರ ಕಾರ್ಯದರ್ಶಿ ರಂಜಿತ್ ಮೈರ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ್ ಬಜ, ಉಪಾದ್ಯಕ್ಷರಾದ ವಿನೀತ್ ಶೆಟ್ಟಿ, ಕಾರ್ಯದರ್ಶಿಗಳಾದ ಲೋಹಿತ್ ಅಗರಿ, ಕರುಣಾಕರ ಮೆಲ್ಕಾರ್, ಸುರೇಶ್ ಕೋಟ್ಯಾನ್, ಕೋಶಾದಿಕಾರಿ […]

Read More

ಬಂಟ್ವಾಳ ಪುರಸಭೆಗೆ ಶಾಸಕರ ದಿಢೀರ ಭೇಟಿ, ಪರಿಶೀಲನೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೋಮವಾರ ದಿಢೀರನೇ ಪುರಸಭೆಗೆ ಭೇಟಿ ನೀಡಿ, ವಿವಿಧ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕುಡಿಯುವ ನೀರು, ಸಮಗ್ರ ಒಳಚರಂಡಿ ಯೋಜನೆ, ಟ್ರಾಫಿಕ್ ಸಮಸ್ಯೆ, ಕಸವಿಲೇವಾರಿ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಸಲಹೆ, ಸೂಚನೆಗಳನಿತ್ತರು. ಮಂಗಳೂರು ಸಹಾಯಕ ಕಮಿಷನರ್, ಪುರಸಭೆಯ ಆಡಳಿತಾಧಿಕಾರಿ ರವಿಚಂದ್ರ ನಾಯಕ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಕೆಯುಡಬ್ಲ್ಯೂಎಸ್ ಎಂಜಿನಿಯರ್‌ಗಳಾದ ಜಗದೀಶ್, ಸಂಶುದ್ದೀನ್, ಪುರಸಭೆಯ ಕಿರಿಯ ಇಂಜಿನಿಯರ್ ಡೊಮೆನಿಕ್ ಅರಣ್ಯಾಧಿಕಾರಿ, […]

Read More

ಸರಕಾರದ ಸವಲತ್ತುಗಳನ್ನು ತಾರತಮ್ಯವಿಲ್ಲದೆ ವಿತರಿಸಲು ಕ್ರಮ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಕಂದಾಯ ಇಲಾಖೆ, ಸಂಗಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಅರ್ಹ ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ, ವ್ರದ್ದಾಪ್ಯ ವೇತನ ಮತ್ತು ವಿವಿಧ ಸರಕಾರಿ ಸವಲತ್ತು ವಿತರಣೆ ಕಾರ್ಯಕ್ರಮ ಸಂಗಬೆಟ್ಟು ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿಗುತ್ತು ಅವರು 46 ಜನರಿಗೆ ಹಕ್ಕುಪತ್ರ, ಹಾಗೂ 10 ಜನರಿಗೆ ಮಾಸಿಕ ವೇತನ ಪಿಂಚಣಿ , 10 ಜನರಿಗೆ ಪಾಕ್ರತಿಕ ವಿಕೋಪ ಚೆಕ್ ಹಾಗೂ ರಾಷ್ಟ್ರೀಯ ಕುಟುಂಬ ಸಹಾಯ ಧನ ಚೆಕ್ ವಿತರಿಸಿ ಬಳಿಕ […]

Read More

ಬಂಟ್ವಾಳ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಶಾಸಕರಿಗೆ ಮನವಿ

ಬಂಟ್ವಾಳ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಧೂಳು ಸಮಸ್ಯೆ ಹಾಗೂ ವಿವಿಧ ಬೇಡಿಕೆಯನ್ನು ಪೂರೈಸಲು ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ನೀಡಿದರು. ಬಿಸಿರೋಡಿನ ಹಳೆ ಎಲ್.ಐ.ಸಿ.ಯಿಂದ ಪಿಂಟೋ ಕಾಂಪ್ಲೆಕ್ಸ್ ವರೆಗೆ ರಸ್ತೆ ದುರಸ್ತಿ ಪಡಿಸಿ ಧೂಳಿನಿಂದ ನಮ್ಮನ್ನು ಮುಕ್ತಿಗೊಳಿಸಿ ಎಂದು ಅವರು ಹೇಳಿದ್ದಾರೆ. ಗ್ರಾಮಾಂತರ ಪರವಾನಿಗೆ ಹೊಂದಿದ ರಿಕ್ಷಾದವರು ಬಿಸಿರೋಡಿನಲ್ಲಿ ಬಾಡಿಗೆ ಮಾಡದಂತೆ ಕ್ರಮ ಕೈಗೊಳ್ಳಲು ಕೂಡ ಮನವಿ ಮಾಡಿದರು. ಈಗಾಗಲೇ ಎ.ಎಸ್.ಪಿ. ಹಾಗೂ ಟ್ರಾಫಿಕ್ ಪೋಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ಇದೇ ಸಂಧರ್ಭದಲ್ಲಿ […]

Read More

Back To Top
Highslide for Wordpress Plugin