ರಾಜ್ಯ ಬಿಜೆಪಿ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶರತ್ ಅವರ ಬಿ.ಸಿ ರೋಡಿನ ಅಂಗಡಿಗೆ ದಿನಾಂಕ 13-7-2017ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ರಾಜೇಶ್ ನಾಯ್ಕ್, ಸಂಜೀವ್ ಮಠಂದೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಂಟ್ವಾಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಮನೆಗೆ ಜುಲೈ 13 ರಂದು ರಾಜ್ಯ ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷರೂ ಆದ ಬಿ.ಎಸ್. ಯಡಿಯೂರಪ್ಪ ಅವರು ಭೇಟಿ ನೀಡಿ ಶರತ್ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಸದೆ ಕು. ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ಡಾ| ಕಲ್ಲಡ್ಕ ಪ್ರಭಾಕರ್ ಭಟ್, ರಾಜೇಶ್ ನಾಯ್ಕ್, ಸಂಜೀವ್ ಮಠಂದೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಬಿಜೆಪಿ ಬಂಟ್ವಾಳದ ಕಛೇರಿಗೆ ದಿನಾಂಕ 12-7-2017ರಂದು ಭೇಟಿ ನೀಡಿ ಬಂಟ್ವಾಳದ ಪ್ರಸ್ತುತ ಪರಿಸ್ಥಿತಿ ಬಗ್ಗೆ ರಾಜೇಶ್ ನಾಯ್ಕ್ ಹಾಗೂ ಇತರ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದರು.
ಕೇಂದ್ರ ಸಚಿವರಾದ ಶ್ರೀ ಡಿ.ವಿ ಸದಾನಂದಗೌಡರವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮನೆಗೆ ದಿನಾಂಕ 11-7-2017ರಂದು ಭೇಟಿ ನೀಡಿ ಶರತ್ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಶಾಸಕ ವಿ.ಸುನೀಲ್ ಕುಮಾರ್ ಮತ್ತು ರಾಜೇಶ್ ನಾಯ್ಕ್ ಹಾಗೂ ಇತರ ಗಣ್ಯರು ಇದ್ದರು.
ಕೇಂದ್ರ ಸಚಿವರಾದ ಶ್ರೀ ಡಿ.ವಿ ಸದಾನಂದಗೌಡರವರು ಬಿ.ಸಿ ರೋಡಿನ ಬಿಜೆಪಿ ಕಛೇರಿಗೆ ಭೇಟಿ ನೀಡಿ ಬಂಟ್ವಾಳದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದರು. ಈ ಸಂದರ್ಭದಲ್ಲಿ ಅವರರೊಂದಿಗೆ ಕಾರ್ಕಳ ಶಾಸಕರಾದ ವಿ.ಸುನೀಲ್ ಕುಮಾರ್, ಜನಪರ ಯುವನಾಯಕ ತಾಲೂಕಿನ ಬಿಜೆಪಿಯ ಅಧ್ಯಕ್ಷರಾದ ಶ್ರೀ ರಂಜನ್ ಗೌಡ, ರಾಜೇಶ್ ನಾಯ್ಕ್ ಮತ್ತು ಜಿ.ಪ ಸದಸ್ಯ ಶ್ರೀ ಕೊರಗಪ್ಪ ನಾಯ್ಕ್, ತಾ.ಪ ಸದಸ್ಯ ವಿಜಯ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಮ್ಮಾಜೆಯ ನಾಗಶ್ರೀ ಮಿತ್ರ ವೃಂದದ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ್ ಪಾಲ್ಗೊಂಡಿದ್ದರು.
ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕರು,ಕಾರ್ಕಳದ ಶಾಸಕರಾದ ವಿ.ಸುನಿಲ್ ಕುಮಾರ್ ಬಿ.ಸಿ ರೋಡಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದರು ಈ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಮತ್ತು ರಾಜೇಶ್ ನಾಯ್ಕ್ ಹತ್ಯೆಗೀಡಾದ ಸ್ವಯಂಸೇವಕ ಶರತ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹಾಗೂ ಧೈರ್ಯದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶಾಸಕ ಸುನೀಲ್ ಅವರು ರೂ.1 ಲಕ್ಷ ಪರಿಹಾರದ ಮೊತ್ತವನ್ನು ಶರತ್ ತಂದೆ ತನಿಯಪ್ಪರವರಿಗೆ ಹಸ್ತಾಂತರಿಸಿದರು.
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸ್ವಯಂಸೇವಕ ಶರತ್ ಅವರ ಪಾರ್ಥೀವ ಶರೀರಕ್ಕೆ ರಾಜೇಶ್ ನಾಯ್ಕ್ ಅಂತಿಮ ನಮನ ಸಲ್ಲಿಸಿದರು.