ರೂ. 135 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಬಂಟ್ವಾಳ ಜಕ್ರಿಬೆಟ್ಟುವಿನಿಂದ ನರಿಕೊಂಬು ಸಂಪರ್ಕದ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣದ ಪ್ರದೇಶಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು.
ಈ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣ ದಿಂದ ಎರಡು ಭಾಗದ ಜನರಿಗೆ ಪ್ರಯೋಜನವಾಗಲಿದ್ದು, ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.