35 ಲಕ್ಷ ರೂ ವೆಚ್ಚದಲ್ಲಿ ಆಚಾರಿಪಲ್ಕೆ ಶಾಲಾ ಕೊಠಡಿ ನಿರ್ಮಾಣಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕರು ಸರಕಾರಿ ಶಾಲೆಗಳ ಅಭಿವೃದ್ಧಿಗೆ ರಾಜ್ಯಸರಕಾರ ಬಂಟ್ವಾಳ ಕ್ಷೇತ್ರಕ್ಕೆ ಗರಿಷ್ಟ ಅನುದಾನ ಒದಗಿಸಿದ್ದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್‌ರವರ ಸಹಕಾರದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನ ಇನ್ನಷ್ಟು ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನಪಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್,ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ್ ಪ್ರಭು,ಸಂಜೀವ ಪೂಜಾರಿ , ಪ್ರಕಾಶ್ ಅಂಚನ್, ಕರುಣೇಂದ್ರ ಪೂಜಾರಿ, ಲಕ್ಮೀನಾರಾಯಣ ಗೌಡ, ಚಿದಾನಂದ ಕುಲಾಲ್, ಆನಂದ ಕೋಟ್ಯಾನ್, ರಮಾನಾಥ ರಾಯಿ,ನಂದರಾಮರೈ,ಯಶೋಧರ ಕರ್ಬೆಟ್ಟು,ವಸಂತ ಕುಮಾರ್ ಅಣ್ಣಳಿಕೆ, ಪುರುಷೋತ್ತಮ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್ ,ಸಂತೋಷ ರಾಯಿಬೆಟ್ಟು, ವಿಕೇಶ್,ಮೋಹನದಾಸ್,ಕೇಶವ,ಸೀತರಾಮ ಪೂಜಾರಿ, ಡೊಂಬಯ ಅರಳ, ಗಣೇಶ್ ರೈ ಮಾಣಿ,ಅಭಿಯಂತರಾರದ ಅಜಿತ್ ಮತ್ತಿರರು ಉಪಸ್ಥಿತರಿದ್ದರು.