ಬಂಟ್ವಾಳ : ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 3.95 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಜೂ. 29ರಂದು ನೆರವೇರಿಸಿದರು.
1.75 ಕೋಟಿ ವೆಚ್ಚದ ಶೇಡಿಗುರಿ ಮುಂಡೆಜೋರ ರಸ್ತೆ, 80 ಲಕ್ಷದ ರೂ. ವೆಚ್ಚದ ಮದಕ ಕೇದಿಗೆ ರಸ್ತೆ, 69 ಲಕ್ಷ ರೂ. ವೆಚ್ಚದ ಮೊಗರ್ನಾಡು ಪುಳಿಕುಕ್ಕು ರಸ್ತೆ, 6 ಲಕ್ಷ ರೂ. ವೆಚ್ಚದ ಅಂತರ ಬೈಲು ರಸ್ತೆ, 5 ಲಕ್ಷ ರೂ. ವೆಚ್ಚದ ಭಾಗೀರಥಿಕೋಡಿ ಗಡಂಗಿನಗುಡ್ಡೆ ರಸ್ತೆ, 15 ಲಕ್ಷ ರೂ. ವೆಚ್ಚದ ನಾಯಿಲ ಕಾಪಿಕಾಡು ಬೋರುಗುಡ್ಡೆ ರಸ್ತೆ, 5 ಲಕ್ಷ ರೂ. ವೆಚ್ಚದ ನರಿಕೊಂಬು ಹಿಂದೂ ರುದ್ರಭೂಮಿ ರಸ್ತೆಯನ್ನು ಉದ್ಘಾಟಿಸದರು.
30 ಲಕ್ಷ ರೂ. ವೆಚ್ಚದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ತಡೆಗೋಡೆ, 10 ಲಕ್ಷ ರೂ. ವೆಚ್ಚದ ಬೋರುಗುಡ್ಡೆ ರಸ್ತೆ ಬದಿ ತಡೆಗೋಡೆ ಪ್ರಗತಿ ವೀಕ್ಷಣೆ ನಡೆಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಸದಸ್ಯರಾದ ರಂಜಿತ್ ಕೆದ್ದೇಲು, ವಸಂತ ಭೀಮಗದ್ದೆ, ಜಯರಾಜ್ ಶಂಭೂರು, ಕಿಶೋರ್ ಶೆಟ್ಟಿ ಅಂತರ, ಉದಯ ಶಾಂತಿಲ, ಗಣ್ಯರಾದ ರಘು ಸಪಲ್ಯ, ಕೃಷ್ಣಾನಂದ ಮಾಣಿಮಜಲು, ರಮಾನಾಥ ರಾಯಿ, ಪಕ್ಷದ ಪ್ರಮುಖರಾದ ಸುರೇಶ್ ಕೋಟ್ಯಾನ್, ಆನಂದ ಎ. ಶಂಭೂರು, ನಾರಾಯಣ ಪೂಜಾರಿ ದರ್ಖಾಸು ಮತ್ತು ಬೂತ್ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು, ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.