Rajesh Naik

7 ನೇದಿನದ ಪಾದಯಾತ್ರೆಗೆ ಹಳೇಗೇಟುವಿನಲ್ಲಿ ಚಾಲನೆ

ಬಂಟ್ವಾಳ:  ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಸಾರಥ್ಯದ 13 ದಿನಗಳ ’ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ 7 ನೇದಿನದ ಪಾದಯಾತ್ರೆಗೆ ಸೋಮವಾರ ಬೆಳಿಗ್ಗೆ ಹಳೇಗೇಟುವಿನಲ್ಲಿ ಚಾಲನೆ ನೀಡಲಾಯಿತು.

1600

ವಂದೇಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಯಾತ್ರೆ ವಿದ್ಯಾ ಆನಂದ ಅವರ ಮನೆಯಿಂದ ಹೊರಟು ದೇವಸ್ಯಪಡೂರು, ದೇವಸ್ಯ ಮುಡೂರು, ಸರಪಾಡಿ, ಮಣಿನಾಲ್ಕೂರು, ಉಳಿ ಗ್ರಾಮಗಳಲ್ಲಿ ಸಂಚರಿಸಿತು.

2600
7ನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರಮುಖರಾದ ಪುರುಷ ಸಾಲ್ಯಾನ್ ನೆತ್ತರಕೆರೆ, ಪ್ರಥ್ವಿರಾಜ್, ರಝಾಕ್, ಗಣೇಶ್ ರೈ, ಚೇತನ್, ವಿಲಾಸಿನಿ, ಶೀಲಾ, ರಾಮಚಂದ್ರ ಭಟ್ ಮತ್ತಿತರರು ಹಾಜರಿದ್ದರು.

Back To Top