ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಐದನೇಯ ದಿನದ ಪಾದಯಾತ್ರೆಗೆ ಶನಿವಾರ ಬೆಳಿಗ್ಗೆ ಕಲ್ಲಡ್ಕ ಏಳ್ತಿಮಾರ್‌ನಲ್ಲಿ ಚಾಲನೆ ನೀಡಲಾಯಿತು.
ವಂದೇ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಾಯಾತ್ರೆ ಏಳ್ತಿಮಾರ್ ಬಾಬುಶೆಟ್ಟಿಯವರ ಮನೆಯಿದ ಹೊರಟು ಸೂರಿಕುಮೇರು, ಬರಿಮಾರು, ಕಡೇಶ್ವಾಲ್ಯ, ಗಡಿಯಾರ, ಪೆರಾಜೆ, ನೆಟ್ಲಮುಡ್ನೂರು ಅನಂತಾಡಿ ಗ್ರಾಮಗಳಲ್ಲಿ ಸಂಚರಿಸಿತು.
5ನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಮಾಜಿ ಶಾಸಕ ರುಕ್ಮಯ ಪೂಜಾರಿ, ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ತಾ.ಪಂ.ಸದಸ್ಯರಾದ ದಿನೇಶ್ ಅಮ್ಟೂರು, ಕಮಲಾಕ್ಷಿ ಕೆ., ಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸುಂದರ ಸಾಲ್ಯಾನ್, ಕಡೇಶ್ವಾಲ್ಯ
ಗ್ರಾ.ಪಂ.ಅಧ್ಯಕ್ಷ ಸದಾಶಿವ ಬಿ. ಪ್ರಮುಖರಾದ ರಾಮದಾಸ್ ಬಂಟ್ವಾಳ, ಪರುಷ ಸಾಲ್ಯಾನ್ ನೆತ್ತರಕೆರೆ, ಚರಣ್ ಜುಮಾದಿಗುಡ್ಡೆ, ಪ್ರಥ್ವಿರಾಜ್, ಗಣೇಶ್ ಶೆಟ್ಟಿ, ಶಾಂತಪ್ಪ ಪೂಜಾರಿ, ಲೋಕನಾಥ, ರಝಾಕ್, ವಿಜಯಾಧರ್ ರೈ, ನಾರಾಯಣ ಶೆಟ್ಟಿ, ಸುರೇಂದ್ರ ರಾವ್, ಮೋನಪ್ಪ ಕುಲಾಲ್, ತನಿಯಪ್ಪ ಗೌಡ, ಬಾಬು ಮತ್ತಿತರರು ಹಾಜರಿದ್ದರು.