ಬಂಟ್ವಾಳ: ಶಾಸಕರ 1.50 ಕೋಟಿ ವೆಚ್ಚದ ಅನುದಾನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಡಗಬೆಳ್ಳೂರು ಗ್ರಾಮದ ವರಟಿಲ್ ಮುಲಾರಪಟ್ನ ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪೊಳಲಿ ಮೂಡಬಿದ್ರೆ ಸಂಪರ್ಕದ ಈ ರಸ್ತೆಗೆ ಕಾಂಕ್ರೀಟಿಕರಣ ಮಾಡುವ ಬಗ್ಗೆ ಈ ಭಾಗದ ನಿವಾಸಿಗಳಿಂದ ಬಹು ಬೇಡಿಕೆ ಇತ್ತು. ಇಲ್ಲಿನ ಜನರ ಬೇಡಿಕೆಗೆ ಅನುಗುಣವಾಗಿ ಕಾಂಕ್ರೀಟ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ಹಾಗೂ ಬೇಡಿಕೆಗೆ ಅನುಗುಣವಾಗಿ ಹಂತಹಂತವಾಗಿ ಕೆಲಸ ಮಾಡುವ ಭರವಸೆ ನೀಡಿದರು.
ತಾ.ಪಂ.ಸದಸ್ಯ ಯಶವಂತ ಪೊಳಲಿ, ಬಂಟ್ವಾಳ ಕ್ಷೇತ್ರ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಮೋರ್ಚಾದ ಕಾರ್ಯದರ್ಶಿ ನಂದರಾಮ ರೈ, ಅರಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗದೀಶ ಅಳ್ವ, ಪಂಚಾಯತ್ ಸದಸ್ಯ ರದಾ ಎಂ.ಬಿ.ಆಶ್ರಪ್, ಹಾಜಬ್ಬ, ಪ್ರಮುಖರಾದ ಪ್ರಕಾಶ್ ಆಳ್ವ, ರತ್ನಾಕರ ಕೋಟ್ಯಾನ್, ಹರಿಯಪ್ಪ ಮುತ್ತೂರು, ರಮಾನಾಥ ರಾಯಿ, ಗಣೇಶ್ ರೈ, ರಂಜನ್ ಕುಮಾರ್, ಸುಂದರ ಶೆಟ್ಟಿ, ರಮೇಶ್ ಭಟ್ಟಾಜೆ, ಪುರುಷೋತ್ತಮ ಶೆಟ್ಟಿ ವಾಮದಪದವು, ಎಂ.ಅಬ್ದುಲ್ ಹಮೀದ್ , ಮಸೀದಿ ಅಧ್ಯಕ್ಷ ಅಶ್ರಪ್, ಜಿ.ಎಚ್.ಎಮ್, ಎಂ.ಎಸ್.ಶಾಲಿ, ಕಾರ್ಯದರ್ಶಿ ಸಜೀಯುದ್ದೀನ್, ಪುತ್ತುಮೋನು ಮಾರ್ಗದಂಗಡಿ, ಎ.ಪಿ.ನಾಶೀರ್, ಎಂ.ಪಿ.ಲತೀಪ್, ಇಬ್ರಾಹಿಂ, ಜಬ್ಬಾರ್, ಗುತ್ತಿಗೆದಾರ ಶಾಫಿ ಪಟ್ನ, ಕೆ.ಆರ್. ಡಿ .ಎಲ್. ನ ಇಂಜಿನಿಯರ್ ರಕ್ಷಿತ್, ಮತ್ತಿತರರು ಉಪಸ್ಥಿತರಿದ್ದರು.