ಬಂಟ್ವಾಳ: ನಬಾರ್ಡ್ ಯೋಜನೆಯಡಿ 94 ಲಕ್ಷ ಅನುದಾನದಲ್ಲಿ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಊರಿನ ಜನರ ಸಹಕಾರದ ಜೊತೆ ಕಾಲೇಜಿನ ಬೇಡಿಕೆಗೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಸರಕಾರದ ಅನುದಾನದ ಜೊತೆಯಲ್ಲಿ ದಾನಿಗಳ ಸಹಕಾರ ಇದ್ದರೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು. ಯಾವುದೇ ಸರಕಾರಿ ಸಂಸ್ಥೆ ಗಳು ಅಭಿವೃದ್ಧಿ ಗೆ ಎಲ್ಲರ ಅಗತ್ಯ ಎಂದು ಅವರು ಹೇಳಿದರು. ಪ್ರತಿಯೊಬ್ಬರು ಶಿಕ್ಷಿತ ರಾದಾಗ ಮಾತ್ರ ದೇಶ ಬಲಿಷ್ಟ ವಾಗಿ ಅಭಿವೃದ್ಧಿ ಪಥದಲ್ಲಿ ಸಾಗಲು ಅವಕಾಶ ಇದೆ ಹಾಗಾಗಿ ಸರಕಾರದ ಜೊತೆ ಸಂಘಸಂಸ್ಥೆಗಳು, ಗ್ರಾಮಸ್ಥರು ಸೇರಿ ಶಿಕ್ಷಣ ವ್ಯವಸ್ಥೆ ಗಳನ್ನು ಬಲಪಡಿಸುವ ಸಂಕಲ್ಪವನ್ನು ಮಾಡಬೇಕು ಎಂದು ಅವರು ತಿಳಿಸಿದರು. ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು , ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡುವುದು ನಮ್ಮೆಲ್ಲರ ಜವಬ್ದಾರಿ .
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಶ್ರೀ ಕಾಂತ ಶೆಟ್ಟಿ, ಪಾ.ಮ.ರೈ,ಸೇ.ಸಂಘದ ಅಧ್ಯಕ್ಷ ಜಯಶಂಕರ ಬಾಶ್ರಿತ್ತಾಯ, ಗುತ್ತಿಗೆದಾರ ಎಮ್.ಆರ್. ಕನ್ಟ್ರಕ್ಷನ್ ಮಾಲಿಕ ಎಮ್.ಆರ್ ಆಶ್ರಫ್, ಸಹಾಯಕ ಕಾರ್‍ಯನಿರ್ವಾಹಣಾಧಿಕಾರಿ ಲೋಕೋಪಯೋಗಿ ಇಲಾಖೆ ಷಣ್ಮುಗಂ, ಪ್ರಾಶುಂಪಾಲ ಕೆ, ವಸಂತ ಶೆಟ್ಟಿ, ಉಪಪ್ರಾಶುಂಪಾಲ ಜಯರಾಮ್ ಶೆಟ್ಟಿ, ಉಪನ್ಯಾಸಕರಾದ ಬಾಬು ಗಾಂವಕ್ಕರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಹಾಬಲ ರೈ, ಎಂ. ಸುಬ್ರಹ್ಮಣ್ಯ ಭಟ್, ಕೆ.ಸುರೇಶ್ ಶೆಟ್ಟಿ, ವಿಶ್ವನಾಥ ಕೊಟ್ಟಾರಿ, ಗ್ರಾ.ಪಂ. ಅಧ್ಯಕ್ಷ ಕೆ.ವಿಧ್ವನಾಥ ಬೆಳ್ಚಡ, ತಾ.ಪಂ. ಮಾಜಿ ಅಧ್ಯಕ್ಷ ಯಶವಂತ, ವಸಂತ ಶೆಟ್ಟಿ, ವೀರೆಂದ್ರ ಕುಲಾಲ್ ಉಪಸ್ಥಿತರಿದ್ದರು. ಭೂಮಿಪೂಜೆ ಧಾರ್ಮಿಕ ವಿಧಿವಿಧಾನವನ್ನು ಸುಬ್ರಹ್ಮಣ್ಯ ಭಟ್ ನೇರವೇರಿಸಿದರು.