ಬಾಳ್ತಿಲ ಗ್ರಾಮದ ವಸಂತಿ ಆಚಾರ್ಯ ಎಂಬುವವರ ಮೇಲೆ ಅಡಿಕೆ ಮರಬಿದ್ದು ಬೆನ್ನುಹುರಿಗೆ ಗಾಯವಾಗಿದ್ದು ಇವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ವೈಯುಕ್ತಿಕ ಧನಸಹಾಯ ಮಾಡಿದರು, ಹೆಚ್ಚಿನ ಚಿಕಿತ್ಸೆಗೆ 10 ಲಕ್ಷ ರೂ.ವರೆಗೆ ಹಣದ ಅಗತ್ಯವಿದ್ದು ತೀವ್ರ ಬಡತನದಲ್ಲಿರುವ ಕುಟುಂಬಕ್ಕೆ ನೆರವಿನ ಅಗತ್ಯವಿದ್ದು ಈ ಪ್ರಕರಣವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಚೆನ್ನಪ್ಪ ಕೋಟ್ಯಾನ್ ,ದಿನೇಶ್ ಅಮ್ಟೂರು, ಶಿವರಾಜ್, ಮೋಹನ್ ಪಿ.ಎಸ್, ಪಂ.ಅಧ್ಯಕ್ಷರಾದ ವಿಠಲನಾಯ್ಕ್, ಪೂರ್ಣಿಮಾ, ಶರತ್,ಆನಂದ ಶಂಭೂರು, ಉದಯ ಶಾಂತಿಲ, ರತ್ನಾಕರ ಶೆಟ್ಟಿ ,ವಿಶ್ವನಾಥ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.