Rajesh Naik

ಅಮ್ಟಾಡಿ ಗ್ರಾ.ಪಂನಲ್ಲಿ ಗ್ರಾಮ ಸ್ಪಂದನ ಕಾರ್ಯಕ್ರಮ

ಬಂಟ್ವಾಳ : ನಾನು ನಿಮ್ಮ ಧ್ವನಿಯಾಗಿದ್ದೇನೆ, ಕಷ್ಟಗಳಿಗೆ ಸ್ಪಂದನೆ ನೀಡುತ್ತೇನೆ, ನಿಮ್ಮ ಸಲಹೆ ಮತ್ತು ಬೇಡಿಕೆಗಳಿಗೆ ಸದಾ ಜೊತೆಗಿರುತ್ತೇನೆ ಎಂದು ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು. ಅವರು ಜೂ.28ರಂದು ಅಮ್ಟಾಡಿ ಗ್ರಾ.ಪಂನಲ್ಲಿ “ಗ್ರಾಮದ ಕಡೆ ಶಾಸಕರ ನಡೆ” ಗ್ರಾಮ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. 1 ಕೋಟಿ 20 ಲಕ್ಷ ಅನುದಾನ ಈ ಗ್ರಾ.ಪಂ ಬಂದಿದ್ದು ಕಾಮಗಾರಿಗಳು ನಡೆಯುತ್ತಿವೆ. ಉಳಿದಂತೆ ಗ್ರಾಮದ ಜನರಲ್ಲಿ ಇರುವ ಬೇಡಿಕೆಗಳಿಗೆ ಮತ್ತು ಸಮಸ್ಯೆಗಳ ಪರಿಹರಕ್ಕಾಗಿ ಈ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇನೆ. ಸರಕಾರದ ಯೋಜನೆ ಪ್ರತಿಯೊಬ್ಬರಿಗೂ ತಲುಪಬೇಕು ಮತ್ತು ಜನರಿಗೆ ಯೋಜನೆಗಳ ಮಾಹಿತಿ ಸಿಗಬೇಕು ಎಂದು ಒತ್ತು ನೀಡಿ ಅಧಿಕಾರಿಗಳ ಜೊತೆ ನಿಮ್ಮ ಬಳಿ ಬಂದಿದ್ದೇನೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಪಂ.ಅನುದಾನದಲ್ಲಿ ಕುರಿಯಾಳ ಕುಟಿಲ ನಿವಾಸಿ ವಿಕಲಾಂಗೆ ಭವಾನಿ ಅವರಿಗೆ ವೀಲ್ ಚೇರ್‌ನ್ನು ಶಾಸಕರು ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡಿದರು. ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ನಡೆದ ಕಾಮಗಾರಿಗಳ ವೀಕ್ಷಣೆ ನಡೆಸಿದ ಬಳಿಕ ರಸ್ತೆಗಳ ಉದ್ಗಾಟನೆ ನಡೆಸಲಾಯಿತು. ಕಾರ್ಯಕ್ರಮದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಸಮಸ್ಯೆಗಳಿಗೆ ಶೀಘ್ರವಾಗಿ ಮುಕ್ತಿ ನೀಡುವಂತೆ ತಿಳಿಸಿದರು. ಸ್ವಚ್ಚತೆಗೆ ಆದ್ಯತೆ ನೀಡಿ, ಬಹಳ ಪ್ರಮುಖವಾಗಿ ಬರುವ ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಬೇಕಾದ ಕ್ರಮಗಳನ್ನು ನಾವು ಮಾಡಬೇಕಾಗಿದೆ. ಪ್ರತಿ ಗ್ರಾ.ಪಂ.ನವರು ಈ ಕಾರ್ಯಕ್ರಮಕ್ಕೆ ಕೈ ಜೋಡಿಸಬೇಕು ಎಂದರು. ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ತಾ.ಪಂ ಸದಸ್ಯೆ ಮಲ್ಲಿಕಾ ವಿ.ಶೆಟ್ಟಿ ಉಪಾಧ್ಯಕ್ಷ ಯಶೋಧ, ಗ್ರಾ.ಪಂ.ಸದಸ್ಯರಾದ ಶೇಖರ್ ಶೆಟ್ಟಿ, ಬಬಿತಾ ಕೋಟ್ಯಾನ್, ಚೇತನಾ, ಪೂರ್ಣಿಮಾ, ಶ್ರೀಮತಿ ಶೆಟ್ಟಿ, ಐರಿನ್ ಡಿಸೋಜ, ಮೋಹಿನಿ, ವಿಶ್ವನಾಥ, ದೇವದಾಸ್, ಚಂದ್ರಾವತಿ ನಾಯ್ಕ, ಸುಜಿಲ್ ಕೆ, ಸುರೇಂದ್ರ, ಸುಧಾಕರ ಶೆಟ್ಟಿ, ರತಿ ಭಂಡಾರಿ, ಪಿ.ಡಿ.ಒ. ಮಹಮ್ಮದ್ , ಕಂದಾಯ ಅಧಿಕಾರಿ ನವೀನ್, ಗ್ರಾಮ ಕರಣೀಕರಾದ ಶಶಿಕುಮಾರ್, ಅಮೃತಾಂಶಿ, ಸಿ.ಡಿ.ಪಿ.ಒ.ಗಾಯತ್ರಿ ಬಾಯಿ, ಪಂ.ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕೆ. ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ರಾಮ್ ದಾಸ ಬಂಟ್ವಾಳ, ಶ್ರೀಕಾಂತ್ ಶೆಟ್ಟಿ ಸಜಿಪ, ಸೀತಾರಾಮ ಪೂಜಾರಿ, ರಮನಾಥ ರಾಯಿ, ಪುರುಷೋತ್ತಮ ವಾಮದಪದವು, ನಂದರಾಮ್ ರೈ, ಪ್ರದೀಪ್ ಅಜ್ಜಿಬೆಟ್ಟು, ಸುದರ್ಶನ ಬಜ, ಗಣೇಶ್ ರೈ ಮಾಣಿ, ಮತ್ತಿತರು ಉಪಸ್ಥಿತರಿದ್ದರು. ಗ್ರಾ.ಪಂ.ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಸ್ವಾಗತಿಸಿದರು ಪಿ.ಡಿ.ಒ. ಮಹಮ್ಮದ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Amtadi-concrete-raod-11

Back To Top
Highslide for Wordpress Plugin