ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ ಸಂಸ್ಮ್ಕರಣೆ ಮತ್ತು ಕರಿಯಂಗಳ ಗ್ರಾಮದ ಬಿಜೆಪಿ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆ ಸರ್ವಮಂಗಳ ಸಭಾಂಗಣದಲ್ಲಿ ನಡೆಯಿತು. ಕರಿಯಂಗಳ ಗ್ರಾಮದ ವಿವಿಧ ಬೇಡಿಕೆಗೆ ಶಾಸಕರು ಸ್ಪಂದಿಸಿದ್ದು ಸುಮಾರು 2.40 ಕೋಟಿಗೂ ಮಿಕ್ಕಿದ ವಿವಿಧ ಕಾಮಗಾರಿಗಳಿಗೆ ಅನುದಾನ ಮಂಜೂರಾತಿ ಆಗಿದ್ದು, ಕುಡಿಯುವ ನೀರಿನ ಅಭಾವವಿದ್ದು ಈಗಾಗಲೇ 3 ಕೊಳವೆ ಬಾವಿಗೆ ಕೊರೆಯಲಾಗಿದೆ. ಮುಂದಿನ ಅವಧಿಯ ಆದ್ಯತೆ ಮೇರೆಗೆ ವಿವಿಧ ಕಾಮಗಾರಿಗಳಿಗೆ ಅನುದಾನವನ್ನು ನೀಡುವ ಭರವಸೆಯನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ, ಕ್ಷೇತ್ರ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ, ವೆಂಕಟೇಶ್ ನಾವಡ, ತಾ.ಪ.ಸದಸ್ಯ ಯಶವಂತ ಪೊಳಲಿ, ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ಪಂಚಾಯತ್ ಸಮಿತಿ ಅಧ್ಯಕ್ಷ ಗೋಪಾಲ ಬಂಗೇರ, ಪಂಚಾಯತ್ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.