ಬಂಟ್ವಾಳ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ಕೈಗೊಂಡ ಮಹತ್ವದ ಕಾರ್ಯ ಫಲ ನೀಡಿದೆ. ಡ್ರಜ್ಜಿಂಗ್ ಮೆಷಿನ್ ಮೂಲಕ ಎಂ.ಆರ್.ಪಿ.ಎಲ್.ನ ಹೂಳು ತೆಗೆದಾಗ ನೀರು ಹೊರಗೆ ಹರಿಯಿತು.
ಕುಡಿಯುವ ನೀರಿನ ಸಮಸ್ಯೆ ಉಂಟಾದ ವೇಳೆ ಎಂ.ಆರ್.ಪಿ.ಎಲ್ ಡ್ಯಾಂ ನಲ್ಲಿ ನೀರು ಸ್ಟಾಕ್ ಇದೆ ಆದರೆ ಅ ನೀರು ಕೆಳಗೆ ಹೋಗಲು ವ್ಯವಸ್ಥೆ ಇಲ್ಲದೆ ಉಪಯೋಗ ಕ್ಕೆ ಸಿಗುತ್ತಿಲ್ಲ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದ ಶಾಸಕ ರಾಜೇಶ್ ನಾಯಕ್ ಅವರು ಎಂ.ಆರ್.ಪಿ.ಎಲ್.ಡ್ಯಾಂ ನ ಲ್ಲಿ ಹೂಳು ತುಂಬಿದ್ದು ನೀರಿನ ಹರಿಗೆ ತೊಂದರೆ ಯಾಗಿದೆ ಎಂದು ಮನಗಂಡರು. ಕೂಡಲೇ ಸ್ಥಳಕ್ಕೆ ಡ್ರಜ್ಜಿಂಗ್ ಮೆಷಿನ್ ಕರೆಯಿಸಿ ಹೂಳು ತೆಗೆಸಿದರು.
ಎಂ.ಅರ್.ಪಿ.ಎಲ್.ನಿಂದ ನೀರು ಕೆಳಗೆ ಹರಿದರೆ ಹಿಂದಿನ ಕಾಲದ ಬೋಟ್ ವೇ ಮೂಲಕ ನೇರವಾಗಿ ತುಂಬೆವರೆಗೆ ನೀರು ಬರುವ ಲೆಕ್ಕಾಚಾರ ಇವರದು. ಬೋಟ್ ವೇ ಯಲ್ಲಿ ಕೆಲವೊಂದು ಕಡೆಗಳಲ್ಲಿ ಮರಳು ಹಾಗೂ ಬಂಡೆ ಕಲ್ಲುಗಳು ಅಡ್ಡವಾಗಿವೆ ಅದನ್ನು ತೆರವುಗೊಳಿಸುವಂತೆಯೂ ಸೂಚನೆ ನೀಡಿದ್ದರು. ಡ್ರೆಜ್ಜಿಂಗ್ ಮೂಲಕ ಮರಳು ತೆರವು ಮಾಡಿದ ಬಳಿಕ ಎಂ ಆರ್ ಪಿ ಎಲ್ ಡ್ಯಾಂ ನಿಂದ ನೀರು ಕೆಳಗೆ ಇಂದು ಹರಿಯುತು.