ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್ ಉಳಿಪ್ಪಾಡಿಯವರು, ಪುರಸಭಾ ಸದಸ್ಯರಾದ ಗೋವಿಂದ ಪ್ರಭು ಬಂಟ್ವಾಳ, ಪುರಸಭಾ ಮುಖ್ಯಾಧಿಕಾರಿ ಮೆಬೆಲ್ ಡಿಸೋಜ, ನಗರ ನೀರು ಸರಬರಾಜು ಇಂಜಿನೀಯರ್ ಶೋಭಾಲಕ್ಷ್ಮಿ, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಸರಪಾಡಿಯಲ್ಲಿ ನೇತ್ರಾವತಿ ನದಿ ಅಡ್ಡಲಾಗಿ ಕಟ್ಟಿರುವ ಎಂ.ಆರ್.ಪಿ.ಎಲ್ ಡ್ಯಾಂನಲ್ಲಿರುವ ಪರಿಸ್ಥಿತಿ ಅವಲೋಕಿಸಿದರು. ಡ್ಯಾಂನ ಮೇಲ್ಫಾಗದಲ್ಲಿ ಮರಳು ತುಂಬಿದ್ದು ನೀರಿನ ಕೆಳ ಹರಿವಿಗೆ ತೊಂದರೆಯಾಗುತ್ತಿರುವ ಬಗ್ಗೆ ಪರಿಶೀಲನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಮರಳು ತೆರವು ಮಾಡಿ ನೀರು ಸರಾಗ ಹರಿಯುವ ಮೂಲಕ ಬಂಟ್ವಾಳ ಹಾಗೂ ಮಂಗಳೂರಿನ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಈ ಸಂಧರ್ಭದಲ್ಲಿ ಬಿ.ದೇವದಾಸ್ ಶೆಟ್ಟಿ, ಗಣೇಶ್ ರೈ ಮಾಣಿ ಮತ್ತು ಎಂ.ಆರ್.ಪಿ.ಎಲ್ ಡ್ಯಾಂನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.