Rajesh Naik

ಬಂಟ್ವಾಳ: ಬಿಜೆಪಿ ಕ್ಷೇತ್ರ ಪ್ರಮುಖರ ಸಭೆ

ಬಂಟ್ವಾಳ: ಲೋಕಸಭಾ ಚುನಾವಣಾ ಸಿದ್ಧತೆಗಾಗಿ ಬಿಜೆಪಿ ಕ್ಷೇತ್ರ ಪ್ರಮುಖರ ಸಭೆ ಜ. 3ರಂದು ಸಂಜೆ ಬಿ.ಸಿ. ರೋಡ್‌ ಟ್ರೇಡ್‌ ಸೆಂಟರ್‌ ಬಿಜೆಪಿ ಕಚೇರಿಯಲ್ಲಿ ದ.ಕ. ಲೋಕಸಭಾ ಕ್ಷೇತ್ರ ಸಂಚಾಲಕ ಗೋಪಾಲಕೃಷ್ಣ ಹೇರಳೆ ನೇತೃತ್ವದಲ್ಲಿ ನಡೆಯಿತು. ಸಂಚಾಲಕ ಹೇರಳೆ ಅವರು ಪಕ್ಷದ ಕಾರ್ಯಕರ್ತರು, ನೇತಾರರು ಚುನಾವಣೆಗೆ ಯಾವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ವಿಭಾಗ ಸಂಘಟನ ಕಾರ್ಯದರ್ಶಿ ಪ್ರಸಾದ್‌ ಕುಮಾರ್‌ ಬೆಳ್ತಂಗಡಿ ಅವರು ಪಕ್ಷದ ಮುಂದಿರುವ ಸವಾಲುಗಳು ಮತ್ತು ವ್ಯವಸ್ಥೆಯ ಕುರಿತು ವಿವರಣೆ ನೀಡಿದರು.

ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್, ಜಿಲ್ಲಾ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಚಂದ್ರಹಾಸ ಉಳ್ಳಾಲ್‌, ಪ್ರ. ಕಾರ್ಯದರ್ಶಿ ರಾಮದಾಸ ಬಂಟ್ವಾಳ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

Bantwal-leaders-meet-11

Back To Top