ಕರ್ನಾಟಕ ಸರಕಾರದ ಕಂದಾಯ ಇಲಾಖೆ ಹಾಗು ಮಂಚಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ 94ಸಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಮಂಚಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದಿನಾಂಕ : 06-10-2018, ಶನಿವಾರ ನಡೆಯಿತು. ಬಂಟ್ವಾಳ ಶಾಸಕರಾದ ಮಾನ್ಯ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಕಾರ್ಯಕ್ರಮ ಉದ್ಪಾಟಿಸಿ ಹಕ್ಕುಪತ್ರ ವಿತರಿಸಿ ಮಾತನಾಡುತ್ತಾ ಗ್ರಾಮದ ಏಳಿಗೆಗಾಗಿ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು ಹಾಗೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ನೆಮ್ಮದಿಯಿಂದ ಬದುಕುವಂತಾಗಳು ಸರಕಾರದ ಸವಲತ್ತುಗಳು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಸಹಕಾರಿಸಬೇಕೆಂದು ಕರೆ ನೀಡಿದರು.
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷರಾದ ಮೋಹನದಾಸ ಶೆಟ್ಟಿಯವರು ಸ್ವಾಗತಿಸಿದರು. 69 ಜನ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ಹಾಗೂ 8 ಜನರಿಗೆ ಸಂಧ್ಯಾ ಸುರಕ್ಷಾ,ವೃಧಾಪ್ಯ ವೇತನ, ಹಕ್ಕುಪತ್ರ ಹಾಗೂ ಒಬ್ಬರಿಗೆ ಪ್ರಾಕೃತಿಕ ವಿಕೋಪದ ಪರಿಹಾರ ನಿಧಿಯನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್ ಮಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಸಿಬ್ಬಂದಿಗಳು, ಬಿಜೆಪಿ ಮಂಚಿ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ರಾವ್ ಪತ್ತುಮುಡಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕರು ಕಾರ್ಯಕ್ರಮ ನಿರೂಪಿಸಿ ಗ್ರಾಮಕರಣಿಕರಾದ ಕುಮಾರಿ ಅಶ್ವಿನಿ ಸಹಕರಿಸಿದರು.