Rajesh Naik

ಸರಕಾರದ ಸವಲತ್ತುಗಳನ್ನು ತಾರತಮ್ಯವಿಲ್ಲದೆ ವಿತರಿಸಲು ಕ್ರಮ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಕಂದಾಯ ಇಲಾಖೆ, ಸಂಗಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಅರ್ಹ ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ, ವ್ರದ್ದಾಪ್ಯ ವೇತನ ಮತ್ತು ವಿವಿಧ ಸರಕಾರಿ ಸವಲತ್ತು ವಿತರಣೆ ಕಾರ್ಯಕ್ರಮ ಸಂಗಬೆಟ್ಟು ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಡೆಯಿತು.

ಶಾಸಕ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿಗುತ್ತು ಅವರು 46 ಜನರಿಗೆ ಹಕ್ಕುಪತ್ರ, ಹಾಗೂ 10 ಜನರಿಗೆ ಮಾಸಿಕ ವೇತನ ಪಿಂಚಣಿ , 10 ಜನರಿಗೆ ಪಾಕ್ರತಿಕ ವಿಕೋಪ ಚೆಕ್ ಹಾಗೂ ರಾಷ್ಟ್ರೀಯ ಕುಟುಂಬ ಸಹಾಯ ಧನ ಚೆಕ್ ವಿತರಿಸಿ ಬಳಿಕ ಮಾತನಾಡಿ ಸರಕಾರದ ಸವಲತ್ತುಗಳನ್ನು ತಾರತಮ್ಯವಿಲ್ಲದೆ ವಿತರಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ಧೇನೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಶ್ರಮದ ಫಲವಾಗಿ ಬಡವರಿಗೆ ಸರಕಾರಿ ಸವಲತ್ತುಗಳು ಕ್ಲಪ್ತ ಸಮಯದಲ್ಲಿ ಸಿಗುವಂತಾಗುತ್ತದೆ. ಫಲಾನುಭವಿಗಳಿಗೆ ನಿರಾಶೆಯಾಗದ ರೀತಿಯಲ್ಲಿ ಕಾನೂನು ಮಿತಿಯನ್ನು ಅರಿತುಕೊಂಡು ಅಧಿಕಾರಿಗಳು ಕೆಲಸ ಮಾಡಿದಾಗ ಸರಕಾರದ ಸವಲತ್ತುಗಳು ಜನರಿಗೆ ಮುಟ್ಟಲು ಸಾಧ್ಯವಾಗುತ್ತದೆ, ಪ್ರತಿಯೊಬ್ಬರು ಸರಕಾರದ ಸವಲತ್ತುಗಳನ್ನು ಪಡೆಯಲು ಮುಂದಾಗಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಮಾಜಿ ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಗ್ರಾಮ ಪಂಚಾಯತ್ ಅದ್ಯಕ್ಷೆ ಗುಲಾಬಿ ಶೆಟ್ಟಿ, ಗ್ರಾ.ಪಂ.ಉಪಾಧ್ಯಕ್ಷ ಸತೀಶ್ ಪೂಜಾರಿ, ಎಪಿಎಂಸಿ ಮಾಜಿ ಸದಸ್ಯ ರತ್ನಾಕರ ಚೌಟ , ಗ್ರಾ.ಪಂ.ಸದಸ್ಯರಾದ ಶ್ರೀಧರ ಎಸ್ ಪಿ, ಸುಲೋಚನ, ನಳಿನಿ, ವಿಮಲ, ಸುರೇಶ್ ಕುಲಾಲ, ಮಯ್ಯೆದಿ, ದೇವಪ್ಪ ಕರ್ಕೇರ, ಪದ್ಮಲತಾ , ಪಂಚಾಯತ್ ಸಿಬ್ಬಂದಿ ಮಹಾಬಲ ನಾಯ್ಕ, ಗ್ರಾಮ ಸಹಾಯಕ ಸತೀಶ್ ಶೆಟ್ಟಿ ಗಾರ್, ಪ್ರಮುಖರಾದ ಉಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಗುಂಡು ಎಸೆತ ಹಾಗೂ ಚಕ್ರ ಎಸೆತದಲ್ಲಿ ಮಿಂಚಿದ ಸಿದ್ದಕಟ್ಟೆ ಗುಣಶ್ರೀ ವಿದ್ಯಾಲಯದ ವಿದ್ಯಾರ್ಥಿ ರಾಷ್ಟ್ರೀಯ ಕ್ರೀಡಾಪಟು ರಮ್ಯಶ್ರೀ ಜೈನ್ ಅವರನ್ನು ಗೌರವಿಸಲಾಯಿತು. ಬಂಟ್ವಾಳ ಕಂದಾಯ ನಿರೀಕ್ಷಕ ‌ನವೀನ್ ಕುಮಾರ್ ಸ್ವಾಗತಿಸಿ, ಗ್ರಾಮ ಕರಣಿಕ ಜನಾರ್ಧನ ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿಲ್ಬಿಯಾ ಪೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

94-c-ertificate-rn-1

94-c-ertificate-rn-2

Back To Top
Highslide for Wordpress Plugin