ಕರೋಪಾಡಿಗ್ರಾಮದ ಬೇಂಗದಗುಡ್ಡೆಯಲ್ಲಿ ಶಾಸಕರ ನಿಧಿಯಿಂದ ಅಳವಡಿಸಲಾದ ರೂ 1.5 ಲಕ್ಷ ವೆಚ್ಚದ ಹೈಮಾಸ್ಕ್ ದೀಪವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಪ್ರಮುಖರಾದ ಉದಯಕುಮಾರ್‌ರಾವ್, ಕರೋಪಾಡಿ ಬಿಜೆಪಿ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ರಘುರಾಮ ಶೆಟ್ಟಿಕನ್ಯಾನ, ಶಕ್ತಿಕೇಂದ್ರ ಅಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ, ಉಪಾಧ್ಯಕ್ಷರಾದ ಹರೀಶ್ ಬೇಡಗುಡ್ಡೆ, ರವಿ ಒಡಿಯೂರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.