ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದಕಾರಣ ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆ ಕೃಷಿಯು ಕೊಳೆ ರೋಗ ಪೀಡಿತವಾಗಿದ್ದು ಬೆಳೆ ಸಂಪೂರ್ಣವಾಗಿ ನಾಶವಾಗಿರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದು ಇದಕ್ಕೆ ಸ್ಪಂಧಿಸಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಹೆಚ್ಚಿನ ಪರಿಹಾರಕ್ಕಾಗಿ ಮಾನ್ಯ ಮುಖ್ಯಮಂತ್ರಿಯವರನ್ನು ಖುದ್ದು ಭೇಟಿಯಾಗಿ ಮನವಿ ಮಾಡಿ ಸಂಬಂದಪಟ್ಟ ತೋಟಗಾರಿಕಾ ಇಲಾಖೆಯಿಂದ ಸಮಿಕ್ಷೆ ಮಾಡಲುರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಮಾತ್ರವಲ್ಲದೆ ಜಿಲ್ಲಾಧಿಕಾರಿಯವರಿಗೆ ಅಡಿಕೆ ಕೊಳೆರೋಗದಿಂದ ನಷ್ಟಕ್ಕೀಡಾದ ಕೃಷಿಕರಿಗೆ ಮಳೆಹಾನಿ ಪರಿಹಾರ ನಿಧಿಯಿಂದಲೂ ನಷ್ಟ ಪರಿಹಾರಒದಗಿಸುವಂತೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಯವರು ದ.ಕ ಜಿಲ್ಲಾಧಿಕಾರಿ ಹಾಗೂ ತೋಟಗಾರಿಕಾ ಜಂಟಿ ನಿರ್ದೇಶಕರಿಂದ ನೇತೃತ್ವದಲ್ಲಿ ಸಮೀಕ್ಷೆ ನಡೆಸಿ ವರದಿ ಬಂದ ನಂತರ ಬೆಳೆಹಾನಿಗೆ ಅನುಕ್ರಮವಾಗಿ ಪರಿಹಾರ ನೀಡಲು ಭರವಸೆ ನೀಡಿರುತ್ತಾರೆ.