ಬಂಟ್ವಾಳ: ಗ್ರಾಮದ ಅಭಿವೃದ್ಧಿಯಿಂದ ಮಾತ್ರ ಈ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಹೇಳಿದರು . ಅವರು ಸಂಗಬೆಟ್ಟು ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಮೊದಲ ಬಾರಿಗೆ ಸಂಗಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಬಾಪೂಜಿ ಸೇವಾ ಕೇಂದ್ರಕ್ಕೆ ಅಧಿಕ್ರತ ಚಾಲನೆಯನ್ನು ನೀಡಿ ಬಳಿಕ ಗಾಂಧಿ ಗ್ರಾಮ ಪುರಸ್ಕಾರ , ಸೋಲಾರ್ ದಾರಿ ದೀಪ ಉದ್ಘಾಟಿಸಿ ಮಾತನಾಡಿದರು. ಗ್ರಾಮಾಭಿವ್ರದ್ದಿಯೇ ಗಾಂಧೀಜಿಯವರ ಕನಸಾಗಿತ್ತು. ಜನಪ್ರತಿನಿಧಿಗಳಿಂದ , ಅಧಿಕಾರಿಗಳ ನಿಶ್ವಾರ್ಥವಾಗಿ ಕಾರ್ಯನಿರ್ವಹಿಸಿದರೆ ಗ್ರಾಮೀಣ ಅಭಿವೃದ್ಧಿಯಾಗುತ್ತದೆ.
ಸಂಗಬೆಟ್ಟು ಬಾಪೂಜಿ ಸೇವಾ ಕೇಂದ್ರ ದ ಅಡಿಯಲ್ಲಿ ವಿವಿಧ 43 ಸೇವೆಗಳನ್ನು ನೀಡುವ ಕೇಂದ್ರ ಜಿಲ್ಲೆಯಲ್ಲೇ ಪ್ರಥಮವಾಗಿದ್ದು ಇದು ಇತರ ಗ್ರಾಮ ಪಂಚಾಯತ್ ಗೂ ಮಾದರಿಯಾಗಿದ್ದು, ತಾಲೂಕಿನಲ್ಲಿ ಇತರ ಗ್ರಾ.ಪಂ.ಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರವನ್ನು ವಿಸ್ತರಿಸುವಂತೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸೂಚನೆ ನೀಡುತ್ತೇನೆ ಎಂದರು. ಸಿಬ್ಬಂದಿಗಳ ಕೊರತೆಯ ನೆಪವೊಡ್ಡದೆ ಕೆಲಸದ ಅವಧಿಯಲ್ಲಿ ಒಂದು ಹೆಚ್ಚವರಿಯಾಗಿ ಕೆಲಸ ನಿರ್ವಹಿಸಿದಾಗ ಗ್ರಾಮ ಪಂಚಾಯತ್ ನ ಎಲ್ಲಾ ಕೆಲಸಗಳು ಉತ್ತಮವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದರು.
ಗ್ರಾ.ಪಂ.ಅದ್ಯಕ್ಷೆ ಗುಲಾಬಿ ಕಾರ್ಯ ಕ್ರಮದ ಅದ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪಿಂಚಣಿ ಸ್ವೀಕ್ರತಿ ಪತ್ರ, ಪರಿಹಾರ ನಿಧಿ ಚೆಕ್, ಮತ್ತಿತರರ ಸರಕಾರಿ ಸೌಲಭ್ಯ ಗಳನ್ನು ವಿತರಿಸಲಾಯಿತು. ಸಂಗಬೆಟ್ಟು ಗ್ರಾ.ಪಂ.ವ್ಯಾಪ್ತಿಯ 15 ಅಂಗನವಾಡಿ ಕೇಂದ್ರಗಳಿಗೆ ರೇಡಿಯೋ ಸೆಟ್ ವಿತರಿಸಲಾಯಿತು. ವೇದಿಕೆಯಲ್ಲಿ ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ, ಗ್ರಾ.ಪಂ.ಉಪಾಧ್ಯಕ್ಷ ಸತೀಶ್ ಪೂಜಾರಿ, ಗ್ರಾ.ಪಂ.ಸದಸ್ಯ ರಾದ ಮಾದವ ಶೆಟ್ಟಿ ಗಾರ್, ಸುರೇಶ್ ಕುಲಾಲ್, ಕೆ.ಮಯ್ಯದಿ, ನಳಿನಿ,ಪದ್ಮಲತಾ, ಸುಲೋಚನ, ವಿಮಲಾ ಮೋಹನ , ಗ್ರಾಮ ಕರಣಿಕ ಪರೀಕ್ಷಿತ್, ಮೆಸ್ಕಾಂ ಜೆ.ಇ. ತಿಲಕ್ ಕುಮಾರ್, ಪಶು ವೈದ್ಯಾಧಿಕಾರಿ ಶ್ರೀ ಧರ್,ಪಂಚಾಯತ್ ಸಿಬ್ಬಂದಿ ಗಳಾದ ಮಾಹಾಬಲ ನಾಯ್ಕ, ಮಹಮ್ಮದ್ ಶಾಫಿ, ಸುರೇಶ್, ನವೀನ್, ಗ್ರಾಮ ಸಹಾಯಕ ಸತೀಶ್ ಶೆಟ್ಟಿ ಗಾರ್, ಗ್ರಂಥ ಲಾಯ ಮೇಲ್ವಿಚಾರಕಿ ಶೋಭಾ ಮತ್ತಿತರರು ಉಪಸ್ಥಿತರಿದ್ದರು.
ಪಿಡಿಒ ಸಿಲ್ವಿಯಾ ಪೆರ್ನಾಂಡಿಸ್ ಸ್ವಾಗತಿಸಿ, ವಂದಿಸಿದರು. ಮಾಜಿ ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಗಾಂಧೀ ಗ್ರಾಮ ಪುರಸ್ಕಾರ ಇದರ 5 ಲಕ್ಷ ವಿಶೇಷ ಅನುದಾನದಲ್ಲಿ ಅಳವಡಿಸಲಾದ ಸೋಲಾರ್ ಬೀದಿ ದೀಪದ ಉದ್ಘಾಟನೆ ನಡೆಯಿತು.