ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಕಟ್ಟೆ ರಾಷ್ಟ್ರೀಯ ಸೇವಾ ಯೋಜನೆ ಇದರ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾಯಕತ್ವ ಗುಣವನ್ನು ಮತ್ತು ಶಿಸ್ತಿನ ಜೀವನಕ್ಕಾಗಿ ವಿದ್ಯಾರ್ಥಿ ಸಂಘ ಸಹಾಯಕ ವಾಗುತ್ತದೆ ಎಂದು ಹೇಳಿದರು.
ಎಲ್ಲಾ ಮಕ್ಕಳ ಜೊತೆ ಸೇರಿಕೊಂಡು ಮಕ್ಕಳಿಗೆ ಜೀವನ ಸ್ಥೈರ್ಯ ಕೊಡುವ ಕೆಲಸಾಡಬೇಕು. ವಿದ್ಯಾರ್ಥಿ ಸಂಘದ ಮೂಲಕ ರಾಜಕೀಯ ಪ್ರವೇಶ ಮಾಡುವ ಮೂಲಕ ಇಂದಿನ ದಿನಗಳಲ್ಲಿ ಕಾಣುತ್ತಿದ್ದೇವೆ, ಇದು ಉತ್ತಮ ಬೆಳವಣಿಗೆ ಅಲ್ಲ. ವಿದ್ಯಾರ್ಥಿಗಳಲ್ಲಿ ಉತ್ತಮ ಕನಸುಗಳು ಬೇಕಾಗಿದೆ. ಜೀವನದಲ್ಲಿ ಉತ್ತಮ ಸಂಸ್ಕಾರದ ಮೂಲಕ ಸ್ಪಷ್ಟವಾದ ಗುರಿಯ ಮೂಲಕ ಮುಂದುವರಿಯರಿ ಎಂದು ಅವರು ಹೇಳಿದರು. ಜಗತ್ತು ಇಂದು ಸ್ಪರ್ದಾತ್ಮಕವಾಗಿ ಬೆಳೆಯುತ್ತಿದೆ ಹಾಗಾಗಿ ವಿದ್ಯಾರ್ಥಿಗಳು ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಂಡು ಹಿರಿಯರ ಮಾರ್ಗದರ್ಶನ ಪಡೆದು ಬೆಳೆಯಲು ಪ್ರಯತ್ನಿಸಿ.
ವಿದ್ಯಾರ್ಥಿಗಳಿಗೆ ಮಾತ್ರ ಭಾಷೆಯಲ್ಲಿ ಕಲಿಯುವ ಗ್ರಾಮೀಣ ವಿದ್ಯಾರ್ಥಿಗಳು ಎನ್ನುವ ತಪ್ಪು ಕಲ್ಪನೆಗಳು ಇದ್ದರೆ ಇಂದೇ ಬಿಟ್ಟು ಬಿಡಿ. ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ ಅದನ್ನು ರೂಪಿಸುವ ಕೆಲಸ ವಿದ್ಯಾರ್ಥಿ ದೆಸೆಯಿಂದಲೇ ಆಗಬೇಕಾಗಿದೆ. ವಿದ್ಯಾರ್ಥಿಗಳ ಸಂಘದ ಮೂಲಕ ಮಾಡಬೇಕಾದ ಕರ್ತವ್ಯಗಳ ಬಗ್ಗೆ ತಿಳಿಸಿದರು. ರಾಜಕೀಯ ವ್ರತ್ತಿ ಎಂದು ಕಾಣದೆ ರಾಜಕೀಯ ಸೇವೆ ಎಂದು ನೋಡಿಕೊಂಡು ಹೋದಾಗ ಅದರಿಂದ ಸಾರ್ವಜನಿಕವಾಗಿ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಬಳಿಕ ನೂತನ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಕಾರ್ಯದ್ಯಕ್ಷ ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಗ್ರಾ.ಪಂ.ಅದ್ಯಕ್ಷ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯಕುಮಾರ್, ಪ್ರೌಢ ಶಾಲಾ ವಿಭಾಗದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಉಮೇಶ್ ಗೌಡ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ಭಟ್, ಸಮಿತಿಯ ಸದಸ್ಯ ನೋಣಯ್ಯ ಶೆಟ್ಟಿ ಗಾರ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ಶ್ರೀ ನಿವಾಸ ನಾಯ್ಕ್ ಸ್ವಾಗತಿಸಿದರು, ವಿದ್ಯಾರ್ಥಿ ಸಂಘದ ನಾಯಕ ಸುಭಾಷ್ ಬಂಗೇರ ಧನ್ಯವಾದ ಮಾಡಿದರು. ಉಪನ್ಯಾಸಕ ಸಂಜಯ್ ಕಾರ್ಯಕ್ರಮ ನಿರೂಪಿಸಿದರು.