ಭೂಮಿಯಲ್ಲಿ ಮುಕ್ಕಾಲು ಭಾಗ ಕಾಡು ಬೆಳೆಸಿದರೆ ಮಾತ್ರ ಮಾನವ ಜೀವಿಸಲು ಸಾಧ್ಯ ಎಂದು ಶಾಸಕ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್ ಹೇಳಿದರು. ಪರಿಸರದಿಂದ ಲಾಭವನ್ನು ಮತ್ತು ಪ್ರಕ್ರತಿಯ ಬಗ್ಗೆ ಪ್ರೀತಿ ಬೆಳೆಸುವ ಕಾರ್ಯ ವಿದ್ಯಾರ್ಥಿ ದೆಸೆಯಿಂದ ಆರಂಭವಾಗಬೇಕು. ವನಮಹೋತ್ಸವ ನಿತ್ಯದ ಕಾರ್ಯಕ್ರಮ ವಾಗಿರಬೇಕು ಅದು ಒಂದು ದಿನಕ್ಕೆ ಮೀಸಲಾಗಬಾರದು. ಕಾಡುಗಳು ಇದ್ದರೆ ಮಾತ್ರ ಮನುಷ್ಯ ಜೀವಿಸಬಹುದು ಎಂದು ಅವರು ಹೇಳಿದರು.
ಅಟಲ್ ಟಿಂಕರ್ ಯೋಜನೆ ಈ ಶಾಲೆಗೆ ಬರುವ ಯೋಚನೆ ಮಾಡಬೇಕಾಗಿದೆ. ಮಾನಸಿಕವಾಗಿ ಮಕ್ಕಳ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ಮಕ್ಕಳು ಪಠ್ಯ ದ ಜೊತೆ ಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಎಂದು ಶಿಕ್ಷರಿಗೆ ಕಿವಿ ಮಾತು ಹೇಳಿದರು. ದ.ಕ.ಜಿಲ್ಲಾ ಪಂಚಾಯತ್, ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಬಂಟ್ವಾಳ ಇವರ ವತಿಯಿಂದ ವಗ್ಗ ಕಾವಳಪಡೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ವನಮಹೋತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ಸಾಮಾಜಿಕ ಅರಣ್ಯ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಶ್ರೀ ನಿವಾಸ ಮೂರ್ತಿ, ಕಾವಳಪಡೂರು ಗ್ರಾ.ಪಂ.ಅದ್ಯಕ್ಷ ಪ್ರಮೋದ್ ಕುಮಾರ್ ರೈ, ಕಾವಳಪಡೂರು ಗ್ರಾ.ಪಂ.ಭವಾನಿ ಎಂ.ಶಾಲಾ ಪೋಷಕ ಸಮಿತಿ ಸದಸ್ಯ ಪಿ.ಜಿನರಾಜ್ ಮತ್ತಿತರರು ಉಪಸ್ಥಿತರಿದ್ದರು. ವಸತಿ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ ಕುಮಾರ್ ಸ್ವಾಗತಿಸಿ, ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ವಂದಿಸಿದರು. ರಶ್ಮಿ ರಾಜೇಶ್ ಬಳಿಗಾರ್ ಕಾರ್ಯಕ್ರಮ ನಿರೂಪಿಸಿದರು.