ಶಾಂತಿ-ಸಹಬಾಳ್ವೆಯ ಸಮೃದ್ಧಿಯ ಬಂಟ್ವಾಳ ನಿರ್ಮಿಸೋಣ ಬೋಳಂತೂರು ಗ್ರಾಮ ಸಮಿತಿ ಅಭಿನಂದನಾ ಸಮಾರಂಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ. ಭಾರತೀಯ ಜನತಾ ಪಾರ್ಟಿ ಬೋಳಂತೂರು ಗ್ರಾಮ ಸಮಿತಿ ವತಿಯೀಂದ ಬಿ.ಜೆ.ಪಿ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ರವರು ಶಾಂತಿ-ಸಹಬಾಳ್ವೆಯ-ಸಮೃದ್ಧಿಯ ಬಂಟ್ವಾಳ ನಿರ್ಮಿಸೋಣ. ನಾನು ಕ್ಷೇತ್ರದ ಬಗ್ಗೆ ಅನೇಕ ಯೋಜನೆಗಳನ್ನು ಹಾಕಿಕೊಂಡು ಬಂಟ್ವಾಳದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದು, ಮುಂದೆಯೂ ತಮ್ಮೆಲ್ಲರ ಸಹಕಾರ ಇರಬೇಕು. ಜೊತೆ ಜೊತೆಯಾಗಿ ಸಾಗಿ ನೆಮ್ಮದಿಯ ಬಂಟ್ವಾಳ ನಿರ್ಮಿಸೋಣ ಸರ್ವರ ಪ್ರೀತಿಯನ್ನು ಗಳಿಸಿ ಒಟ್ಟಾಗಿ ಒಂದಾಗಿ ಸಹಬಾಳ್ವೆಯಿಂದ ಇದ್ದು ಪರಸ್ಪರ ವಿಶ್ವಾಸದಿಂದ ಬಾಳಿ ಬದುಕುವ ಎಂದು ಆಶಯ ವ್ಯಕ್ತ ಪಡಿಸಿದರು.
ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಸಂದರ್ಭೊಚಿತವಾಗಿ ಮಾತನಾಡಿದರು. ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಶುಭ ಹಾರೈಸಿ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನಾ ಮಾತುಗಳನ್ನು ಆಡಿದರು.
ವೇದಿಕೆಯಲ್ಲಿ ಜಿಲ್ಲಾ ಎಸ್.ಸಿ ಮೋರ್ಚದ ಅಧ್ಯಕ್ಷರಾದ ದಿನೇಶ್ ಅಮ್ಟೂರು, ಕಲ್ಲಡ್ಕ ರೈತರ ಸಹಕಾರಿ ಸಂಘದ ಉಪಾಧ್ಯಕ್ಷರು, ಬೋಳಂತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸುಧಾಕರ ರೈ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ಜಯರಾಮ ರೈ ಬೋಳಂತೂರು, ಮಾಜಿ ಕ್ಷೇತ್ರದ ಉಪಾಧ್ಯಕ್ಷರಾದ ಚಂದ್ರಶೇಖರ ಟೈಲರ್, ಬೋಳಂತೂರು ಗ್ರಾಮ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ , ನಾರಾಯಣ ಶೆಟ್ಟಿ, ನಾರಾಯಣ ಟೈಲರ್, ಪಂಚಾಯತ್ ಸದಸ್ಯರು, ಬೂತ್ ಸಮಿತಿಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭ ಸಂಘ ಸಂಸ್ಥೆಗಳಾದ ನವನೀತ ಗೆಳೆಯರ ಬಳಗ, ಸಿದ್ಧಿ ವಿನಾಯಕ ತುಳಸಿವನ, ಶಾರದಾಂಭ ಶೃಂಗಗಿರಿ, ಚಾಲೆಂಜ್ ಫ್ರೆಂಡ್ಸ್ ಕೊಕ್ಕಪುಣಿ, ಮಾರಿಯಮ್ಮ ಯುವಕ ಮಂಡಲ ಬೋಳಂತೂರು, ಕುಟುಂಬ ಜ್ಯೋತಿ ಫ್ರೆಂಡ್ಸ್, ಬೋಳಂತೂರು ಹಾಲು ಉತ್ಪಾದಕರ ಮುಂತಾದ ಸಂಘ ಸಂಸ್ಥೆಗಳಿಂದ ಶಾಸಕರಿಗೆ ಗೌರವಾರ್ಪಣೆ ಮಾಡಲಾಯಿತು.
ಎ,ಪಿ.ಎಂ.ಸಿ ಸದಸ್ಯರಾದ ನೇಮಿರಾಜ ರೈ ಬೋಳಂತೂರು ಪ್ರಸ್ತಾವನೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಕೊಳ್ನಾಡು ಬಿ.ಜೆ.ಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ರೈ ಬೋಳಂತೂರು ಧನ್ಯವಾದ ನೀಡಿದರು.