Rajesh Naik

ಗ್ರಾಮದೆಡೆಗೆ ಬಿಜೆಪಿ ನಡಿಗೆ ಪಾದಾಯಾತ್ರೆಯ ಪತ್ರಿಕಾಗೋಷ್ಠಿ

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ಮುಂದಾಳತ್ವದಲ್ಲಿ ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಶ್ರೀಮತಿ ಸುಲೋಚನಾ ಜಿ.ಕೆ ಭಟ್, ಜಿ.ಆನಂದ, ನಾಗರಾಜ ಶೆಟ್ಟಿ, ತುಂಗಪ್ಪ ಬಂಗೇರ, ಮುಂತಾದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪರಿವರ್ತನೆಗಾಗಿ ನಮ್ಮ ನಡಿಗೆ ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಳೆದ ನಾಲ್ಕುವರೆ ವರ್ಷದಲ್ಲಿ ಈ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಮುಖ್ಯಮಂತ್ರಿ,ಸಚಿವರುಗಳು ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳು , ಹಿಂದೂ ದಮನಕಾರಿ ನೀತಿ, ಭ್ರಷ್ಟಾಚಾರ ಹಗರಣಗಳೇ ಇದಕ್ಕೆ ಸಾಕ್ಷಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಅಶಾಂತಿಯ ವಾತಾವರಣ ದ್ವೇಷದ ರಾಜಕಾರಣ, ಮತಗಳಿಕೆಗಾಗಿ ಒಂದು ವರ್ಗದ ಜನರ ಓಲೈಕೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿನ ವಿಫಲತೆ. ಅಧಿಕಾರಿಗಳಿಗೆ ಒತ್ತಡ.ಇವು ಈ ಜಿಲ್ಲೆಯ ಉಸ್ತುವಾರಿ ಸಚಿವರ ಸಾಧನೆ.

ಈ ಬಗ್ಗೆ ಜನಜಾಗೃತಿಗಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 59 ಗ್ರಾಮ ವ್ಯಾಪ್ತಿಯಲ್ಲಿ ಈ ಕಾಲ್ನಡಿಗೆ ಸಂಚರಿಸಲಿದ್ದು ಜನವರಿ 14 ಮಕರ ಸಂಕ್ರಮಣದ ದಿನ ಅರಳ ಶ್ರೀ ಗರುಡ ಮಹಾಂಕಾಳಿ ದೇವಸ್ಥಾನದಿಂದ ಮಧ್ಯಾಹ್ನ ಕಾಲ್ನಡಿಗೆ ಆರಂಭವಾಗಲಿದೆ. ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಂಜೀವ ಮಠಂದೂರು ರವರ ಅಧ್ಯಕ್ಷತೆಯಲ್ಲಿ ಉದ್ಫಾಟನಾ ಸಭೆ ನಡೆಯಲಿದ್ದು ರಾಜ್ಯ ಮತ್ತು ಜಿಲ್ಲೆಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಕಾಲ್ನಡಿಗೆಯಲ್ಲಿ ರಾಜ್ಯ , ಜಿಲ್ಲೆ ಮತ್ತು ಕ್ಷೇತ್ರದ ಪ್ರಮುಖರು ಭಾಗವಹಿಸಲಿರುವರು. ಪ್ರತಿದಿನ ನೂರಾರು ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಜತೆ ಇರುತ್ತಾರೆ. 13 ದಿನಗಳ ಕಾಲ ನಿರಂತರ ಪಾದಯಾತ್ರೆ ನಡೆಯಲಿದೆ. ಜನವರಿ 26ರ ಸಂಜೆ 3 ಗಂಟೆಗೆ ಬಿ.ಸಿ.ರೋಡಿನಲ್ಲಿ ಪಾದಯಾತ್ರೆಯ ಸಮಾರೋಪ ನಡೆಯಲಿದೆ. ರಾಜ್ಯದ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಾದಯಾತ್ರೆಯ ಸಂದರ್ಭ ಪ್ರತಿದಿನ ಸಂಜೆ ಸಾರ್ವಜನಿಕ ಸಭೆ ನಡೆಯಲಿದ್ದು ರಾತ್ರಿ ಕಾರ್ಯಕರ್ತರ ಮನೆಯಲ್ಲೇ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

2014ರ ಜನವರಿ 14ರಂದು ಬಂಟ್ವಾಳ ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ರವರ ನೇತೃತ್ವದಲ್ಲಿ 13 ದಿನಗಳ ಪಾದಯಾತ್ರೆಯು ನಡೆದಿದ್ದು ಆ ಸಂಧರ್ಭದಲ್ಲಿ 56 ಗ್ರಾಮ ವ್ಯಾಪ್ತಿಯಲ್ಲಿ 272 ಕಿ.ಮೀ ಸಂಚರಿಸಲಾಗಿತ್ತು. ಇದೀಗ 2ನೇ ಬಾರಿ ಬಂಟ್ವಾಳ ಕ್ಷೇತ್ರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬಂಟ್ವಾಳದಲ್ಲಿ ರಾಜಕೀಯ ಪರಿವರ್ತನೆಯನ್ನು ತರಲು ಮತ್ತು ಪಕ್ಷದ ಕಾರ್ಯಕರ್ತರನ್ನು ಸಂಘಟಿಸಲು “ಪರಿವರ್ತನೆಗಾಗಿ ನಮ್ಮ ನಡಿಗೆ” “ಬಂಟ್ವಾಳದ ಪರಿವರ್ತನೆಗಾಗಿ ಗ್ರಾಮದೆಡೆಗೆ ಬಿಜೆಪಿ ನಡಿಗೆ”.

parivartanege-nagide-2

parivartanege-nagide-1

Back To Top
Highslide for Wordpress Plugin