ಪುತ್ತೂರು ತಾಲೂಕಿನ ಮೂಡುಪಿನಡ್ಕದಲ್ಲಿ ಸರ್ಕಾರ ನಿರ್ಮಿಸಿದ ದೇಯಿ ಬೈದೆತಿ ಔಷಧಿ ವನದಲ್ಲಿ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಗೆ ಮತಾಂಧರಾದ ಹನೀಫ್ ಮತ್ತು ಸಂಗಡಿಗರು ಇವರ ವಿಕೃತ ಬುದ್ಧಿಯಿಂದ ತಾಯಿಯ ಪ್ರತಿಮೆಗೆ ಅಪಮಾನಗೊಳಿಸಿ ಅಶ್ಲೀಲಕಾರವಾಗಿ ಪೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪಸರಿಸಿದ್ದು ಖಂಡನೀಯ.
ತುಳುನಾಡಿನ ಸಂಸ್ಕಾರ ,ಸಂಸ್ಕೃತಿಯನ್ನ ಉಳಿಸಿಕೊಂಡು, ಬೆಳೆಸಿಕೊಂಡು ಭಾವನಾತ್ಮಕವಾಗಿ ಜೀವನ ಸಾಗಿಸಿಕೊಂಡು ಬಂದಂತಹ ಸಮಸ್ತ ಹಿಂದೂ ಜನತೆಗೆ ಈ ಕೃತ್ಯದಿಂದ ಅಪಾರ ನೋವು ಆಗಿದೆ. ಇದನ್ನು ಇಡೀ ಹಿಂದು ಸಮಾಜ ಮತ್ತು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ. ಈ ಹೇಯ ಕೃತ್ಯದಲ್ಲಿ ಭಾಗಿಯಾದ ಮತಾಂಧರಲ್ಲಿ ಕೇವಲ ಕಾಟಚಾರಕ್ಕೆ ಒರ್ವ ವ್ಯಕ್ತಿಯನ್ನು ಪೋಲೀಸ್ ಇಲಾಖೆ ಬಂಧಿಸಿದ್ದು ಆತನಿಗೆ ಸಹಕರಿಸಿದ ಉಳಿದ ಮತಾಂಧದ ವ್ಯಕ್ತಿಗಳನ್ನು ಬಂಧಿಸಿ ಕಠಿನ ಕಾನೂನು ಕ್ರಮ ಜರಗಿಸಬೇಕಾಗಿಯೂ ಗರಡಿಗಳಲ್ಲಿ ಪೂಜಿಸಲ್ಪಡಬೇಕಾದ ಯುಗ ಪುರುಷ ಕೋಟಿ ಚೆನ್ನಯ ಹಾಗೂ ದೈವಾಂಶ ಸಂಭೂತೆಯಾದ ದೇಯಿ ಬೈದೆತಿಯ ಪ್ರತಿಮೆಗಳನ್ನು ಸೂಕ್ತ ರಕ್ಷಣೆ ನೀಡದೆ ಸರಿಯಾದ ಆವರಣ ಗೋಡೆಯನ್ನು ಸಹ ನಿರ್ಮಿಸದೆ ಪುತ್ತೂರು ತಾಲೂಕಿನ ಮೂಡುಪಿನಡ್ಕದ ಔಷಧಿ ವನದಲ್ಲಿ ನಿರ್ಮಿಸಿದ್ದು ಖಂಡನೀಯವಾಗಿದೆ.
ಈ ಹೇಯ ಕೃತ್ಯದಲ್ಲಿ ಭಾಗಿಯಾದ ಉಳಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಜೆಪಿ ಮುಖಂಡ ರಾಜೇಶ್ ನಾಯ್ಕ್ ಆಗ್ರಹಿಸಿದರು.
ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಬಿಜೆಪಿ ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಶಾಸಕರು ರುಕ್ಮಯ ಪೂಜಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಕ್ಷೇತ್ರ ಸಮಿತಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಭಂಡಾರಿ,ಸಂಗಬೆಟ್ಟು ಶಕ್ತಿಕೇಂದ್ರದ ಅಧ್ಯಕ್ಷರಾದ ರತ್ನ ಕುಮಾರ್ ಚೌಟ, ಸಂಗಬೆಟ್ಟು ಶಕ್ತಿಕೇಂದ್ರದ ಪ್ರಧಾನಕಾರ್ಯಕಾರ್ಯ ಸಂಜೀವ ಪೂಜಾರಿ ಪಿಲಿಂಗಾಲು, ಎಂ ತುಂಗಪ್ಪ ಪೂಜಾರಿ, ಪ್ರಕಾಶ್ ಅಂಚನ್, ಚೆನ್ನಪ್ಪ ಕೋಟ್ಯಾನ್,ರವೀಂದ್ರ ಕಂಬಳಿ, ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ, ದೇವಪ್ಪ ಪೂಜಾರಿ, ಸಂತೋಷ್ ರಾಯಿ, ಲಕ್ಷ್ಮೀನಾರಾಯಣ, ಕೇಶವ ಗೌಡ, ಕಮಲಾಕ್ಷಿ ಕೆ ಪೂಜಾರಿ, ಗೀತಾ ಚಂದ್ರಶೇಖರ್, ಗಣೇಶ್ ರೈ ಮಾಣಿ, ಸದಾಶಿವ ಬರಿಮಾರು, ಗಂಗಾಧರ ಕೋಟ್ಯಾನ್, ಸುಗುಣ ಕಿಣಿ, ಲಕ್ಷ್ಮೀಗೋಪಾಲಾಚಾರ್ಯ, ಜಯಂತಿ, ಕುಲ್ಯಾರು ನಾರಾಯಣ ಶೆಟ್ಟಿ, ಯಶವಂತ ಪೊಳಲಿ, ತನಿಯಪ್ಪ ಗೌಡ, ರವಿರಾಜ್ ಬಿ.ಸಿ.ರೋಡ್, ಮಚ್ಚೇಂದ್ರ ಸಾಲಿಯಾನ್, ಪುರುಷೋತ್ತಮ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಯಾದ ಸೀತಾರಾಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.