Rajesh Naik

ಕಡೇಶ್ವಾಲ್ಯ ದೇವಸ್ಥಾನದಲ್ಲಿ ಕಳ್ಳತನ : ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆಯ ಕಡೇಶ್ವಾಲ್ಯ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಗರ್ಭಗುಡಿಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ನಡೆದಿದ್ದು ದೇಗುಲದ ಬೆಲೆಬಾಳುವ ಆಭರಣಗಳನ್ನು ಕಳ್ಳರು ದೋಚಿರುವ ಘಟನೆ ಬೆಳಕಿಗೆ ಬಂದ ಕೂಡಲೇ ಸಾವಿರಾರು ಭಕ್ತಾದಿಗಳು ಸೇರಿದ್ದು ಈ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಉಳಿಪ್ಪಾಡಿ ರಾಜೇಶ್ ನಾಯ್ಕ್ ಭೇಟಿ ನೀಡಿ ಸ್ಥಳಿಯರಲ್ಲಿ ಘಟನೆಯ ವಿವರ ಪಡೆದರು. ಊರವರ ಸಮ್ಮುಖದಲ್ಲಿ ಶೀಘ್ರವೇ ಕಳ್ಳತನಗೈದ ಆರೋಪಿಗಳ ಬಂಧನಕ್ಕೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ. ದ.ಕ ಜಿಲ್ಲೆಯಲ್ಲಿ ಕಾರಣೀಕದ ಕ್ಷೇತ್ರವಾದ ಇಲ್ಲಿ ದುಷ್ಕರ್ಮಿಗಳು ನುಗ್ಗಿರುವಂತಹ ಘಟನೆಯನ್ನು ಖಂಡಿಸಿದರು. ಕ್ಷೇತ್ರದ ಭಕ್ತಾದಿಗಳು ಆತಂಕಗೊಂಡಿದ್ದಾರೆ ಭಕ್ತರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಶೀಘ್ರವಾಗಿ ಪೋಲೀಸ್ ಇಲಾಖೆ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕಾಗಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ , ಜಿ.ಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ,ಮಾಜಿ ಜಿ.ಪಂ ಸದಸ್ಯರಾದ ಚೆನ್ನಪ್ಪ ಆರ್ ಕೋಟ್ಯಾನ್, ಕಡೇಶ್ವಾಲ್ಯ ಪಂಚಾಯತ್ ಅಧ್ಯಕ್ಷೆ ಶ್ಯಾಮಲ ಶೆಟ್ಟಿ, ಕಡೇಶ್ವಾಲ್ಯ ವ್ಯವಸಾಯ ಸೇವಾಸಹಕಾರಿ ಬ್ಯಾಂಕ್‌ನ ವಿದ್ಯಾಧರ ರೈ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಾಂತಪ್ಪ ಪೂಜಾರಿ, ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ತಿರುಮಲೇಶ್ವರ ಭಟ್,ರಮಾನಾಥ ರಾಯಿ, ಪಂಚಾಯತ್ ಸದಸ್ಯರಾದ ಸುರೇಶ್ ಬನಾರಿ, ಸುರೇಶ್ ಕನ್ನೊಟ್ಟು, ಸುರೇಂದ್ರ ರಾವ್ ನೆಕ್ಕಿಲಾಡಿ, ಸನತ್ ಆಳ್ವ ಅಮೈ, ಲಲಿತ ನೆತ್ತರ, ಸಂಪತ್ ಕೋಟ್ಯಾನ್ ಕಡೇಶ್ವಾಲ್ಯ, ಸುರೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ತಾಲ್ಲೂಕಿನ ಪೂಂಜಾ , ಕಡೆಶೀವಾಲಯ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ , ಅರಳ ಮತ್ತು ಕೊಯಿಲ ಗ್ರಾಮಗಳ ಗ್ರಾಮ ದೇವಸ್ಥಾನ ಶ್ರೀ ಗರುಡ ಮಹಾ ಕಾಳಿ ಸೇರಿದಂತೆ ಬಿಸಿರೋಡಿನಲ್ಲಿ ಹಾಡು ಹಗಲೇ ದಸ್ತಾವೇಜು ಬರಹಗಾರರ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ ನಗದನ್ನು ದೋಚಿರುವ ಪ್ರಕರಣದಿಂದ ಸಾರ್ವಜನಿಕ ವಲಯದಲ್ಲಿ ಆತಂಕ ಉಂಟಾಗಿದ್ದು, ಈ ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಶ್ರೀಘ್ರವಾಗಿ ಬಂದಿಸಿ ಬಯಮುಕ್ತ ವಾತಾವರಣ ನಿರ್ಮಿಸುವಂತೆ ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ತಾಲೂಕಿನ ಮೂರು ಐತಿಹಾಸಿಕ ದೇವಸ್ಥಾನಗಳ ಗರ್ಭ ಗುಡಿಯೊಳಗೆ ಕಳ್ಳರು ನುಗ್ಗಿರುವುದರಿಂದ ಅಪವಿತ್ರವಾಗಿದೆ, ತಾಲೂಕಿನಲ್ಲಿ ವೃತ್ತಿಪರ ಕಳ್ಳರು ತಮ್ಮ ಬಾಲವನ್ನು ಬಿಚ್ಚಿದ್ದು ಪೋಲಿಸರು ಈ ಬಗ್ಗೆ ಗಂಬೀರವಾಗಿಪರಿಗಣಿಸಿ ರಾತ್ರಿ ಗಸ್ತನ್ನು ಹೆಚ್ಚಿಸಬೇಕು , ಹಿಂದೂ ದೇವಾಲಯಗಳಿಗೆ ಸರಕಾರ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Kadeshvalya-temple-robbery

Back To Top
Highslide for Wordpress Plugin