ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಜ್ವಲ ಯೋಜನೆಯಡಿ ನಾವೂರು ಗ್ರಾಮಪಂಚಾಯತ್ ವ್ಯಾಪ್ತಿಯ ಅರ್ಹ ಫಲಾನುಭಾವಿಗಳಿಗೆ ನಾವೂರ ಕನಪಾದೆಯ ಶ್ರೀ ಸತ್ಯದೇವತಾ ಗೆಳೆಯರ ಬಳಗ ಸಭಾಭವನದಲ್ಲಿ ಉಚಿತ ಗ್ಯಾಸ್ ಮತು ಸ್ಟೌವ್ವನ್ನು ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು 125 ಕೋಟಿ ಜನರ ಪ್ರಧಾನ ಸೇವಕರಾಗಿ ಕಾರ್ಯ ಮಾಡುತ್ತಿದ್ದು ಈವರೆಗೆ ರಜೆ ತೆಗೆದುಕೊಳ್ಳದೆ ದಿನದ 18 ಗಂಟೆ ಕೆಲಸ ಮಾಡುತ್ತಿದ್ದು ಪ್ರತಿ 12 ದಿನಕ್ಕೆ ಒಂದರಂತೆ ಹೊಸ ಯೋಜನೆಗಳನ್ನು ಜಾರಿ ಗೊಳಿಸಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರ ಕಷ್ಟವನ್ನು ನೋಡಿ ಉಜ್ವಲ ಯೋಜನೆ ಮೂಲಕ ಪ್ರತಿ ಮನೆಗೆ ಉಚಿತ ಗ್ಯಾಸ್ ಸಂಪರ್ಕ ನೀಡಿ ಪ್ರಧಾನಿ ಮಹಿಳೆಯರ ಕಷ್ಟಕ್ಕೆ ಸ್ಪಂಧಿಸಿದ್ದಾರೆ ಎಂದರು. ಈ ಸಂಧರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ವಿಜಯ, ಸದಸ್ಯರುಗಳಾದ ಸದಾನಂದ ಹಳೆಗೇಟು, ಜನಾರ್ಧನ,ಶೀಲಾ, ಸುಂದರಿ, ರಾಜೀವ, ಯೋಗೀಶ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ವಿಲಾಸಿನಿ ಶಾಂತವೀರ, ಮಾಜಿ ತಾ.ಪಂ ಸದಸ್ಯರಾದ ಶಾಂತವೀರ ಪೂಜಾರಿ, ಕಾರಿಂಜೇಶ್ವರ ಗ್ಯಾಸ್ ಏಜೆನ್ಸಿ ಮಾಲಿಕರಾದ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.