Rajesh Naik

ಬಂಟ್ವಾಳ ತಾಲೂಕು ಹೊಗೆಮುಕ್ತ ತಾಲೂಕು ಆಗಲಿದೆ : ರಾಜೇಶ ನಾಯ್ಕ್

ಬಂಟ್ವಾಳ ಆಗಸ್ಟ್ 2: ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ಉಜ್ವಲ ಯೋಜನೆಯ ಮೂಲಕ ಬಂಟ್ವಾಳ ತಾಲೂಕು ಮುಂದಿನ ದಿನಗಳಲ್ಲಿ ಹೊಗೆಮುಕ್ತ ತಾಲೂಕು ಆಗಲಿದೆಯೆಂದು ಪ್ರಗತಿಪರ ಕೃಷಿಕ ಬಿ.ಜೆ.ಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಅವರು ಉಳಿ ಗ್ರಾಮದ ಯುವಕ ಮಂಡಲ ಸಭಾ ಭವನದಲ್ಲಿ ಉಳಿ ಮತ್ತು ತೆಂಕಕಜೆಕಾರು ಗ್ರಾಮ ವ್ಯಾಪ್ತಿಯ 90 ಜನ ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಮೂಲಕ ಉಚಿತ ಗ್ಯಾಸ್ ಸ್ಟವ್, ಸಿಲಿಂಡರ್ ವಿತರಣೆ ಮಾಡಿ ಮಾತನಾಡಿದರು. ಪ್ರಸ್ತುತ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಉಜ್ವಲ ಪ್ಲಸ್ ಯೋಜನೆಯಲ್ಲಿ ಮುಂದಿನ ದೀಪಾವಳಿಯೊಳಗೆ ಅನಿಲ ಸಂಪರ್ಕ ದೊರೆಯಲಿದೆ ಎಂದರು. ದೇಶದ ಮಹಿಳೆಯರ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ ಉಚಿತ ಅನಿಲ ಸಂಪರ್ಕವನ್ನು ಮಹಿಳೆಯರು ಪಡೆಯಬೇಕು. ಕಟ್ಟಗೆ ಒಲೆಯಿಂದ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವುದರಿಂದ ಬಡವರಿಗೆ ಉಚಿತ ಅನಿಲ ಸಂಪರ್ಕ ಯೋಜನೆ ರೂಪಿಸಲಾಗಿದೆ. ಉಜ್ವಲ ಯೋಜನೆಯಲ್ಲಿ ಸಿಲಿಂಡರ್, ರೆಗ್ಯುಲೇಟರ್,ಸುರಕ್ಷಾ ಪೈಪ್,ಸ್ಟವ್ ಉಚಿತವಾಗಿ ಸಿಗಲಿದೆ.

ಉಳಿ ಮತ್ತು ತೆಂಕಕಜೆಕಾರು ಗ್ರಾಮಗಳನ್ನು ಹೊಗೆಮುಕ್ತ ಗೊಳಿಸುವ ಮಹತ್ತರವಾದ ಜವಾಬ್ದಾರಿ ಗ್ರಾಮ ಪಂಚಾಯತ್ ಸದಸ್ಯರಿಗೆ ಇದ್ದು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಯೋಜನೆಗಳನ್ನು ಮನೆ ಮನೆಗೆ ತ್ವರಿತಗತಿಯಲ್ಲಿ ಮುಟ್ಟಿಸಲು ಶ್ರಮವಹಿಸಬೇಕೆಂದು ವಿನಂತಿಸಿದರು.

ಜನಪ್ರಿಯ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರ ಅವಿರತ ಪರಿಶ್ರಮದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ನಮ್ಮ ದೇಶದ ಹೆಮ್ಮೆಯ ಪ್ರದಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಕನಸಿನ ಯೋಜನೆಗಳನ್ನು ತ್ವರಿತಗತಿಯಲ್ಲಿ ನಮ್ಮ ಗ್ರಾಮಗಳಲ್ಲಿ ಸಾಕಾರಗೊಳಿಸುವತ್ತ ಅವಿರತ ಶ್ರಮವಹಿಸೋಣ ಎಂದರು.

ಎ.ಪಿ.ಎಂ.ಸಿ ಸದಸ್ಯರಾದ ಹರಿಶ್ಚಂದ್ರ ಪೂಜಾರಿ, ಉಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಶ್ ಮೈರ, ಕಾರಿಂಜೇಶ್ವರ ಎಚ್.ಪಿ ಗ್ಯಾಸ್ ಏಜೆನ್ಸಿಯ ಮಾಲೀಕರಾದ ಕರುಣಾಕರ ಶೆಟ್ಟಿ, ಪಂಚಾಯತ್ ಸದಸ್ಯರಾದ ಚಿದಾನಂದ ರೈ ಕಕ್ಕೆಪದವು, ಚೇತನ್ ಉರ್ದೋಟ್ಟು, ಹರೀಶ್ ಪೂಜಾರಿ ಕಕ್ಕೆಪದವು, ವಸಂತ ರಾಮನಗರ. ಗುಲಾಬಿ ಮಾದೋಡಿ, ಬಂಟ್ವಾಳ ಬಿ.ಜೆ.ಪಿ ಕಾರ್ಯದರ್ಶಿ ರಮನಾಥ ರಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ ಕಮಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Ujjwal-gas-

Back To Top
Highslide for Wordpress Plugin