ಬಂಟ್ವಾಳ: ಮಾಣಿ ಕುಲಾಲ ಸಂಘದ ವತಿಯಿಂದ ಮಾಣಿ ಕುಲಾಲ ಭವನದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಕಶೆಕೋಡಿ ಸೂರ್ಯ ನಾರಾಯಣ ಭಟ್ ಅವರ ನೇತೃವದಲ್ಲಿ ನಡೆಯಿತು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಯಾವುದೇ ಪೂಜೆಗಳನ್ನು ಸಾಮೂಹಿಕವಾಗಿ ಮಾಡಿದಾಗ ಅದರಿಂದ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಸಾಮೂಹಿಕ ಪೂಜೆಗಳು ಸಮಾಜವನ್ನು ಒಟ್ಟುಗೂಡಿಸುತ್ತದೆ. ಸಂಘಟನಾತ್ಮಕವಾಗಿ ಯಾವುದೇ ಸಮುದಾಯ ಮುಂದೆ ಬಂದಾಗ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಅವರು ಹೇಳಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ರಾಮಚಂದ್ರ ಮಾಸ್ತರ್, ಹಿರಿಯರಾದ ಬಿ.ಎಸ್.ಕುಲಾಲ್ ಪುತ್ತೂರು, ಕಾರ್ಯದರ್ಶಿ ನಾರಾಯಣ ಕುಲಾಲ್ ಬರಿಮಾರು, ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ , ಗೌರವಾಧ್ಯಕ್ಷ ವೆಂಕಪ್ಪ ಕುಲಾಲ್ ಉಪಸ್ಥಿತರಿದ್ದರು.