Rajesh Naik

ಬಿಜೆಪಿ 10ನೇ ದಿನದ ಪಾದಯಾತ್ರೆಗೆ ವಗ್ಗದಿಂದ ಚಾಲನೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸಾರಥ್ಯದ 13 ದಿನಗಳ ಗ್ರಾಮದೆಡೆಗೆ ಬಿಜೆಪಿ ನಡಿಗೆ ಪಾದಯಾತ್ರೆಯ ಹತ್ತನೇ ದಿನದ ಪಾದಯಾತ್ರೆಗೆ ಗುರುವಾರ ಬೆಳಗ್ಗೆ ವಗ್ಗದಿಂದ ಚಾಲನೆ ದೊರೆಯಿತು.ವಂದೆ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಾಯಾತ್ರೆ ವಗ್ಗ , ವಾಮದಪದವು, ಸಿದ್ಧಕಟ್ಟೆ ಗ್ರಾಮಗಳಲ್ಲಿ ಸಂಚರಿಸಿತು.

2301pkt600

ಹತ್ತನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು , ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ರಾಜ್ಯ ಹಿಂದುಳಿದ ಆಯೋಗದ ಸದಸ್ಯ ತುಂಗಪ್ಪ ಬಂಗೇರ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ಪುರುಷ ಸಾಲಿಯಾನ್ ನೆತ್ತರಕೆರೆ, ಪ್ರಮುಖರಾದ ಪೃಥ್ವಿರಾಜ್, ದೇವದಾಸ್ ಶೆಟ್ಟಿ , ರಾಮ್‌ದಾಸ್ ಬಂಟ್ವಾಳ, ಅಬ್ದುಲ್ ರಝಾಕ್, ಪ್ರಮೋದ್ ಕುಮಾರ್ ರೈ , ವಿನಯ ನಾಯಕ್, ಶಿವಪ್ಪ ಗೌಡ, ಮೋಹನ್‌ದಾಸ್ ಗಟ್ಟಿ ,ಗಂಗಾಧರ ಪೂಜಾರಿ, ದೇವದಾಸ್ ರೈ , ಗಣೇಶ್ ರೈ ಮಾಣಿ, ವಿಠಲ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Back To Top