Rajesh Naik

ವಿಟ್ಲಪಡ್ನೂರು : ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿರವರು ವಿಶೇಷ 3 ಕೋಟಿ ಅನುದಾನದ ವಿಟ್ಲಪಡ್ನೂರು ಗ್ರಾಮದ ಕುಂಟುಕುಡೇಲು ಪೂರ್ಲಿಪಾಡಿ ಅನಿಲಕಟ್ಟೆ ಕಡಂಬು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕ್ಷೇತ್ರದ್ಯಾದಂತ ಲಾಕ್‌ಡೌನ್ ಸಮಯದಲ್ಲಿ 100 ಕೋಟಿಗೂ ಅಧಿಕ ಅನುದಾನದ ಕಾಮಗಾರಿಗಳು ನಡೆಯುತ್ತಿದ್ದು ಅದರಲ್ಲಿಯೂ ಈ ರಸ್ತೆ ಸಂಪೂರ್ಣ ಕಾಂಕ್ರೀಟಿಕರಣಗೊಂಡು ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ ಎಂದರು. ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಪಂ ಉಪಾಧ್ಯಕ್ಷೆ ಸುಧಾ ಶೆಟ್ಟಿ, ಪಂಚಾಯತ್ ಸದಸ್ಯರು ನಾಗೇಶ್ ಶೆಟ್ಟಿ, ಜಯಂತ್ ಪಿ, ಶಾಲಿನಿ, ರೇಷ್ಮಾ ಶಂಕರಿ, ಜಿ.ಪಂ.ಸದಸ್ಯೆ ಮಂಜುಳಾ ಮಾವೆ, ಪ್ರಮುಖರಾದ ಸತೀಶ್ ಶೆಟ್ಟಿ ಪಂಜಿಗದ್ದೆ, ಅಭಿಷೇಕ್ ರೈ ರಜಿತ್ ಅಳ್ವ, ಅರವಿಂದ್ ರೈ, ಈಶ್ವರ ಭಟ್ ಪೂರ್ಲುಪ್ಪಾಡಿ, ಭಾಗೀರಥಿ ಗೌಡ ದೇವರ ಮನೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಯ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಷಣ್ಮುಗಂ ಸಹಾಯಕ ಇಂಜಿನಿಯರ್ ಪ್ರೀತಮ್ ಉಪಸ್ಥಿತರಿದ್ದರು.

Back To Top