Rajesh Naik

ಶಂಭೂರು-ಮಂಜನಕೋಡಿ ರಸ್ತೆ ಕಾಮಗಾರಿಗೆ ಶಾಸಕರ ಗುದ್ದಲಿ ಪೂಜೆ

ಬಂಟ್ವಾಳ: ಶಂಭೂರು-ಮಂಜನಕೋಡಿ ರಸ್ತೆಗೆ ಶಾಸಕರ ಅನುದಾನದಿಂದ ಮಂಜೂರಾದ ರೂ.5 ಲಕ್ಷ ಕಾಮಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುದ್ದಲಿ ಪೂಜೆ ಮಾಡಿದರು.

ಈ ಸಂಧರ್ಭದಲ್ಲಿ ಜಿ.ಪಂ. ಸದಸ್ಯೆ ಕಮಾಲಾಕ್ಷಿ ಕೆ.ಪೂಜಾರಿ, ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಪಂಚಾಯತ್ ಸದಸ್ಯರಾದ ದಿವಾಕರ ಶಂಭೂರು, ಉದಯ ರಾಜ್, ಹೇಮಾಲತಾ ಕೆ., ಜಯಾರಾಜ್ ಕೆ., ಕಿಶೋರ್ ಶೆಟ್ಟಿ, ಕಿರಿಯ ಅಭಿಯಂತರಾದ ಕುಶು ಕುಮಾರ್, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಶಿವ, ಗಣ್ಯರಾದ ಭೋಜರಾಜ್ ಕೆ., ಕಮಾಲಾಕ್ಷ ಎಸ್., ಮಾಧವ ಪಿ., ಪ್ರೇಮನಾಥ ಶೆಟ್ಟಿ ಅಂತರ, ಪಂಚಾಯತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಟೈಲರ್, ಬೂತ್ ಸಮಿತಿ ಅಧ್ಯಕ್ಷರಾದ ಯೋಗೀಶ್, ಸಂತೋಷ್, ಗುತ್ತಿಗೆದಾರರಾದ ನಾಗೇಶ್ ನಾಲ, ಸಂದೇಶ್ ಉಪಸ್ಥಿತರಿದ್ದರು. ತಾ.ಪ.ಮಾಜಿ ಉಪಧ್ಯಕ್ಷ ಆನಂದ ಎ. ಶಂಭೂರು ಸ್ವಾಗತಿಸಿದರು.

shabhuru manjanakodi

Back To Top