Rajesh Naik

ಬಂಟ್ವಾಳಕ್ಕೆ ಆಗಮಿಸಿದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಬ್ರಹ್ಮರಥಕ್ಕೆ ಅದ್ದೂರಿ ಸ್ವಾಗತ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥಕ್ಕೆ ಬಂಟ್ವಾಳ ತುಳುಕೂಟ, ಶ್ರೀರಕ್ತೇಶ್ವರಿ ದೇವಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಿ.ಸಿ. ರೋಡ್ ಜಂಕ್ಷನ್‌ನಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಬೀಳ್ಕೊಡಲಾಯಿತು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ದೀಪ ಬೆಳಗಿಸಿ ರಥದ ಸ್ವಾಗತಕ್ಕೆ ಚಾಲನೆ ನೀಡಿದರು. ಇದೇ ವೇಳೆ ರಥಕ್ಕೆ ಬೃಹದಾಕಾರ ಹೂವಿನ ಮಾಲೆಯನ್ನು ಸಮರ್ಪಿಸಲಾಯಿತು. ಶ್ರೀರಕ್ತೇಶ್ವರಿ ದೇವಿ ದೇವಸ್ಥಾನ ಆಡಳಿತ ಮಂಡಳಿಯಿಂದ ರಥ ಆರತಿ ಬೆಳಗಲಾಯಿತು.

 kukke-bramharatha-1

Back To Top