Rajesh Naik

ಸಂತ್ರಸ್ತರಿಗೆ ಕಿಟ್ ವಿತರಿಸಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಪಾಕೃತಿಕ ವಿಕೋಪದಡಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಸುಮಾರು 315 ಸಂತ್ರಸ್ತರಿಗೆ ಕಿಟ್ ವಿತರಣೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಲಯನ್ಸ್ ಸೇವಾ ಮಂದಿರದಲ್ಲಿ ವಿತರಣೆ ನಡೆಸಿದರು.

ಬಳಿಕ ಮಾತನಾಡಿದ ಅವರು ಮುಖ್ಯಮಂತ್ರಿಗಳು ನೆರೆಯಿಂದ ಹಾನಿಯಾದ ಪ್ರತಿಯೊಂದು ಮನೆಗಳಿಗೆ ರೂ. 10 ಸಾವಿರ ಪರಿಹಾರ ನೀಡುವ ಘೋಷಣೆ ಮಾಡಿದ್ದು ಶೀಘ್ರವಾಗಿ ಫಲಾನುಭವಿಗಳಿಗೆ ಸಿಗಲಿದೆ ಎಂದು ಅವರು ಹೇಳಿದರು.

ಸಮಯಕ್ಕೆ ಸರಿಯಾಗಿ ಜನರ ಸ್ಥಳಾಂತರ ಮಾಡಿದ ಫಲವಾಗಿ ಬಂಟ್ವಾಳ ತಾಲ್ಲೂಕಿನ ಯಾವುದೇ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ಇದಕ್ಕೆ ಅಧಿಕಾರಿಗಳ ಸಹಕಾರವೂ ಅತೀ ಹೆಚ್ಚು ಇತ್ತು ಎಂದು ಅವರು ಹೇಳಿದರು. ಪಾಣೆಮಂಗಳೂರು ಹೋಬಳಿಯ 130 ಬಿ.ಕಸ್ಬಾ ಗ್ರಾಮದ 93, ಹಾಗೂ ಬಿ‌ಮೂಡ ಗ್ರಾಮದ 92 ಜನ ಸಂತ್ರಸ್ತರಿಗೆ ಕಿಟ್ ವಿತರಣೆ ನೀಡಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್ ಅಹಾರಟ ಶಾಖೆಯ ಉಪತಹಶೀಲ್ದಾರ್ ವಾಸುಶೆಟ್ಟಿ, ತಾಲೂಕು ಉಪತಹಶೀಲ್ದಾರ್ ರಾಜೇಶ್ ನಾಯಕ್, ಆಹಾರ ಶಾಖೆಯ ಶ್ರೀನಿವಾಸ್, ಪ್ರಥಮ ದರ್ಜೆ ಸಹಾಯಕ ಪ್ರಸನ್ನ ಪಕಳ, ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ನವೀನ ಬೆಂಜನ ಪದವು, ದಿವಾಕರ ಮುಗುಳಿಯ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೆಕಾರ್, ರಾಜು ಲಂಬಾಣಿ, ವಿಜೇತ ಮತ್ತಿತರರು ಉಪಸ್ಥಿತರಿದ್ದರು.

bantwal-kit-distri-RN

Back To Top
Highslide for Wordpress Plugin