ಬಂಟ್ವಾಳ: ಮಕ್ಕಳ ಹಕ್ಕುಗಳ ಸಂಚಲನಾ ಸಮಿತಿ ಬಂಟ್ವಾಳ ತಾಲೂಕು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ (ರಿ). ಇದರ ಸಹಭಾಗಿತ್ವದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ – 2018 ರ ಅಂಗವಾಗಿ ಮದ್ವ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಂವಾದ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ನಡೆಯಿತು.
ಆರಂಭದಲ್ಲಿ ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆಯವರ ಕಚೇರಿಗೆ ಅಗಮಿಸಿದ ಮಕ್ಕಳು ಅವರೊಂದಿಗೆ ಇಲಾಖೆಯ ಪ್ರಮುಖ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ನ್ಯಾಯಾಲಯದಲ್ಲಿ ನಡೆಯುವ ಕಲಾಪಗಳ ಬಗ್ಗೆ ಕುಳಿತು ಆಲಿಸಿದ, ಬಳಿಕ ಬಂಟ್ವಾಳ ಪೋಲೀಸ್ ಉಪವಿಭಾಗ ಕಚೇರಿಗೆ ಆಗಮಿಸಿ ಎ.ಎಸ್.ಪಿ.ಭಗವಾನ್ ಹ್ರಷಿಕೇಶ್ ಸೋನಾವಣೆ ಅವರ ಜೊತೆ ಠಾಣೆಯ ಮಾಹಿತಿ ಪಡೆದು, ಠಾಣೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ ವೀಕ್ಷಣೆ ನಡೆಸಿದರು. ಕೊನೆಯದಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್ ಅವರ ಕಚೇರಿಗೆ ತೆರಳಿ ಶಾಸಕರೊಂದಿಗೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಷಯಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂಧರ್ಭದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣಾ ಸಮಿತಿ ಸಂಚಾಲಕ ಮಂಜು ವಿಟ್ಲ, ಸಹಸಂಚಾಲಕ ಫಾರೂಕ್ ಬಂಟ್ವಾಳ, ಪಡಿ ಸಂಸ್ಥೆಯ ಸಂಯೋಜಕಿ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.