ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ತಾಲೂಕು ಬಾಲಭವನ ಸಮಿತಿ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ 2018 ನೇ ಸಾಲಿನ ತಾಲೂಕು ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ ಬಿ.ಸಿ.ರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಶಿಕ್ಷಣ ಸಿಕ್ಕಿದಾಗ ಪ್ರತಿಭೆಗಳು ಅನಾವರಣಗೊಳ್ಳುತ್ತದೆ ಎಂದು ಅವರು ಹೇಳಿದರು. ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ ಆದರೆ ಅಂತಹ ವಿದ್ಯಾರ್ಥಿಗಳಿಗೆ ಸರಿಯಾದ ವೇದಿಕೆಗಳು ಸಿಗದೆ ವಂಚಿರಾಗುತ್ತಿದ್ದಾರೆ. ಹಾಗಾಗಿ ಸರಕಾರ ಇಂತಹ ಕಾರ್ಯಕ್ರಮಗಳ ಮೂಲಕ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕೆಲಸ ಆಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಭಾಗವಹಿಸಿ ಎಂದು ಅವರು ಹೇಳಿದರು.
ಶಿಸ್ತು ಬದ್ದ ಸಂಸ್ಕಾರದ ಶಿಕ್ಷಣದ ಜೊತೆಯಲ್ಲಿ ಪ್ರತಿಭೆಗಳು ಅನಾವರಣಗೊಂಡಾಗ ಇನ್ನಷ್ಟು ಉತ್ತಮ ಭವಿಷ್ಯವಿರುವ ಮಕ್ಕಳಿಗೆ ಬಹಳಷ್ಟು ಉತ್ತಮ ಅವಕಾಶಗಳಿವೆ ಅವುಗಳನ್ನು ಉಪಯೋಗಿಸಿಕೊಂಡು ದೇಶಕ್ಕೆ ಹೆಸರು ತರುವಲ್ಲಿ ನಿಮ್ಮ ಪ್ರಯತ್ನಗಳು ನಡೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಅಧ್ಯಕ್ಷ ಚಂಸ್ರಹಾಸ ಕರ್ಕೇರ ಮಾತನಾಡಿ ಸರಕಾರದ ಯೋಜನೆಗಳು ಸಾಕಾರಗೊಳ್ಳಲು ಅಧಿಕಾರಿಗಳ ಜೊತೆ ಫಲಾನುಭವಿಗಳ ಸಹಕಾರ ಅಗತ್ಯ ಎಂದರು. ವಿದ್ಯಾರ್ಥಿಗಳಲ್ಲಿ ನೆಮ್ಮದಿಯ ಬದುಕು ಸಾಗಿಸುವ ಗುರಿ ಇರಲಿ ಎಂದರು. ಪ್ರತಿಭೆಗೆ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಿ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಆಸಕ್ತಿಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಿರಿ ಎಂದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ, ತಾ.ಪಂ.ಇ.ಒ.ರಾಜಣ್ಣ, ಬಂಟ್ವಾಳ ತಹಶಿಲ್ದಾರ ಪುರಂದರ ಹೆಗ್ಡೆ, ಬಂಟ್ವಾಳ ಸಿ.ಡಿ.ಪಿ.ಒ.ಮಲ್ಲಿಕಾ, ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಮೇಲ್ವಿಚಾರಕಿಯರಾದ ಪುಷ್ಷಲತಾ, ಉಷಾ ಕುಮಾರಿ, ಗುಣವತಿ, ರೇಣುಕಾ, ದೀಪಿಕಾ, ಸೋಮಕ್ಕ, ರೋಹಿಣಿ, ಶಾಲಿನಿ, ಸಿಂಧು, ನೀತಾ, ಸುಜಾತ, ಇಂದಿರಾ, ಸರೋಜಾ ಭಟ್ , ಲೋಲಾಕ್ಷಿ, ರೂಪಕಲಾ ಮತ್ತಿತರರು ಉಪಸ್ಥಿತರಿದ್ದರು. ವಿಟ್ಲ ಸಿಡಿಪಿಒ ಸುಧಾಜೋಶಿ ಸ್ವಾಗತಿಸಿ, ಬಂಟ್ವಾಳ ಸಿಡಿಪಿಒ ಮಲ್ಲಿಕಾ ವಂದಿಸಿದರು. ಹಿರಿಯ ಮೇಲ್ವಿಚಾರಕಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.