Rajesh Naik

ಸಮಾಜದ ಕಟ್ಟಕಡೆಯ ವ್ಯಕ್ತಿಯು ಗೌರವ, ನೆಮ್ಮದಿಯಿಂದ ಬದುಕು ಸಾಗಿಸುವಂತಾಗಲಿ- ರಾಜೇಶ್ ನಾಯ್ಕ್

ಕೊಳ್ನಾಡು-ಸಾಲೆತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಹಾಗೂ ಕೊಳ್ನಾಡು ಗ್ರಾಮ ಪಂಚಾಯತ್ ಆಶ್ರಯದಲ್ಲಿ 94ಸಿ ಹಾಗೂ ವಿವಿಧ ಸವಲತ್ತುಗಳನ್ನು ಶಾಸಕ ರಾಜೇಶ್ ನಾಯ್ಕ್ ವಿತರಿಸಿದರು. ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡು ದಾಖಲಾತಿ ಇಲ್ಲದ ವಿಚಾರವನ್ನು ಮನಗೊಂಡು ನಮ್ಮ ಅಂದಿನ ಬಿ.ಜೆ.ಪಿ ಸರಕಾರ ತಂದಿರುವ 94ಸಿ ಯೋಜನೆಯಿಂದ ಅನೇಕರಿಗೆ ಮನೆಯ ಅಡಿಸ್ಥಳದ ದಾಖಲೆ ಸಿಕ್ಕಿರುವುದು ಅಮೃತ ಸಿಕ್ಕಂತಾಗಿದೆ. ಇಂತಹ ಜನಪರ ಯೋಜನೆಗಳು ಇನ್ನಷ್ಟು ಜಾರಿಗೊಳ್ಳಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯು ನೆಮ್ಮದಿಯಿಂದ ಗೌರವದಿಂದ ಬದುಕು ಸಾಗಿಸುವಂತಾಗಲಿ. ಎಂದು ಶುಭ ಹಾರೈಸಿ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಸರಕಾರದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ವೇದಿಕೆಯು ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾ.ಪಂ ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು, ಉಪತಹಶೀಲ್ದಾರರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕರು ದಿವಾಕರ ಪ್ರಾಸ್ತಾವಿಕ ಮಾತುಗಳನ್ನಾಡಿದ್ದರು. ಕೊಳ್ನಾಡು ಗ್ರಾಮ ಅನಿಲಿಕುಮಾರ್ ಸ್ವಾಗತಿಸಿ, ಫಲಾನುಭವಿಗಳ ಪಟ್ಟಿ ವಾಚಿಸಿದರು. ಕೊಳ್ನಾಡು ಪಂಚಾಯತ್ ಅಭಿವೃದ್ಧಿ ಅಧಿಕಾರ ಸುಧೀರ್ ಕುಮಾರ್ ವಂದಿಸಿದರು. ಕೊಳ್ನಾಡು ಮಹಾಶಕ್ತಿ ಕೇಂದ್ರ ಅಧ್ತಕ್ಷರಾದ ಬಾಲಕೃಷ್ಣ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.

Kollnadu-94c-papers

Back To Top
Highslide for Wordpress Plugin