ದ.ಕ.ಜಿಲ್ಲೆ ಉಳಿಯಬೇಕಾದರೆ ಇಲ್ಲಿನ ಕೃಷಿ ಸಂಸ್ಕೃತಿ ಉಳಿಯಬೇಕು, ತೆಂಗು ಬೆಳಗಾರರು ಸೊಸೈಟಿ ಮೂಲಕ ತಂತ್ರಜ್ಞಾನ ದ ಕಂಪೆನಿಗಳನ್ನು ಸ್ಥಾಪನೆ ಮಾಡಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಅವರು ಸಿರಿತುಂಗ ಕರ್ಪೆಯ ಸಮಾಜ ಮಂದಿರದಲ್ಲಿ ಫಲ್ಗುಣಿ ತೆಂಗು ಉತ್ಪಾದಕರ ಸೊಸೈಟಿ ಕರ್ಪೆ ( ರಿ). ಇದರ ಉದ್ಘಾಟನೆಯನ್ನು ನೆರವೇರಿಸಿ ಬಳಿಕ ಮಾತನಾಡಿದರು.
ತೆಂಗಿನ ಪಾರ್ಕ್ ಮಾಡಲು ಚಿಂತನೆ ನಡೆಸಿದ್ದು ಕೆಲವೊಂದು ತಾಂತ್ರಿಕ ಸಮಸ್ಯೆಗಳು ನಿವಾರಣೆಯಾದ ಕೂಡಲೇ ಪಾರ್ಕ್ ನಿರ್ಮಾಣ ಮಾಡುವ ಭರವಸೆ ನೀಡಿದರು. ಕೃಷಿ ಲಾಭದಾಯಕವಾಗಿರುವ ಉದ್ಯಮ ಆದರೆ ಹೊಸ ತಂತ್ರಜ್ಞಾನದ ಅಳವಡಿಕೆಯ ಮೂಲಕ ಕೃಷಿಕರು ಬದಲಾವಣೆಯತ್ತ ಮುಂದುವರಿಯಬೇಕಾಗಿದೆ.
ರೈತರು ಕೀಳರಿಮೆಯ ಮನೋಭಾವದಿಂದ ಹೊರಗೆ ಬಂದಾಗ ಮುಂದಿನ ಪೀಳಿಗೆಗೆ ಕೃಷಿ ಉಳಿಯಬಹುದು. ಕೃಷಿ ಸಂಸ್ಕ್ರತಿಯನ್ನು ಉಳಿಸಿ ಮತ್ತು ಬೆಳೆಸದಿದ್ದರೆ ದ.ಕ.ಜಿಲ್ಲೆ ವ್ರದ್ದಾಶ್ರಮಗಳ ತಾಣವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ. ಕೃಷಿಯನ್ನು ಹೊಸ ತಂತ್ರಜ್ಞಾನದ ಮೂಲಕ ಇಂಡಸ್ಟ್ರಿಯನ್ನಾಗಿ ಮಾಡಿದರೆ ಮಾತ್ರ ಕೃಷಿಯನ್ನು ಉಳಿಸಬಹುದು ಎಂದರು.
ಜಿ.ಪಂ.ತುಂಗಪ್ಪ ಬಂಗೇರ ಮಾತನಾಡಿ ಕೃಷಿಕರು ಸೋಮಾರಿತನವನ್ನು ಬಿಟ್ಟು ಕೆಲಸ ಮಾಡಿದರೆ ಮಾತ್ರ ಕೃಷಿಯಲ್ಲಿ ಬದಲಾವಣೆ ಸಾಧ್ಯ ಎಂದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಮಾಜಿ ತಾ.ಪಂ.ಸದಸ್ಯ ಫಲ್ಗುಣಿ ತೆಂಗು ಉತ್ಪಾದಕರ ಸೊಸೈಟಿಯ ಅದ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ ಜಿಲ್ಲೆಯಲ್ಲಿ ಮಾದರಿಯಾಗಿ ಈ ಸೊಸೈಟಿ ಮುಂದುವರಿಯಲು ಈ ಭಾಗದ ಸರ್ವರ ಸಹಕಾರ ಬೇಕಾಗಿದೆ.
ಈ ಸೊಸೈಟಿಯ ಮೂಲಕ ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಬೆಳವಣಿಗೆಯ ಜೊತೆ ಸರಕಾರದ ಸವಲತ್ತುಗಳನ್ನು ನೇರವಾಗಿ ರೈತರಿಗೆ ನೀಡಲು , ಸಮಸ್ಯೆ ಗಳಿಗೆ ಸ್ಪಂದಿಸುವ ಕೆಲಸ ಮಾಡುವ ಚಿಂತನೆಯೊಂದಿಗೆ ಪ್ರಾರಂಬಿಸಲಾಗಿದೆ ಎಂದರು. ವೇದಿಕೆಯಲ್ಲಿ ಗ್ರಾ.ಪಂ.ಅದ್ಯಕ್ಷೆ ಗುಲಾಬಿ, ಪಿ.ಎಲ್.ಡಿ.ಬ್ಯಾಂಕ್ ಅದ್ಯಕ್ಷ ಸುದರ್ಶನ ಜೈನ್, ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅದ್ಯಕ್ಷ ಪದ್ಮರಾಜ ಬಲ್ಲಾಳ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯದರ್ಶಿ ರವಿಕಿರಣ್ ಪುಣಚ, ಕಾಸರಗೋಡು ಸಿ.ಪಿ.ಸಿ.ಆರ್.ಐ ರವಿಭಟ್, ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್, ಕರ್ಪೆ ಘಟಕ ರೈತ ಸಂಘದ ಅದ್ಯಕ್ಷ ಹರ್ಷಿತ್ ಮಹದಾಯಿ ಮತ್ತಿರರು ಉಪಸ್ಥಿತರಿದ್ದರು.
ಸೊಸೈಟಿ ಕಾರ್ಯದರ್ಶಿ ಗುಣಪಾಲ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಸೊಸೈಟಿಯ ನಿರ್ದೇಶಕ ರಿಚರ್ಡ್ ಮೊರಾಸ್ ಸ್ವಾಗತಿಸಿದರು. ನಿರ್ದೇಶಕ ರಾಮಕ್ರಷ್ಣ ವಂದಿಸಿದರು. ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.