ಬಂಟರ ಸಂಘ ಫರಂಗಿಪೇಟೆ ವಲಯದ ವತಿಯಿಂದ ನಿರ್ಮಾಣವಾಗಿ ಗೃಹ ಭಾಗ್ಯ ಸಮರ್ಪಣಾ ವೇದಿಕೆಯಲ್ಲಿ ಬಂಟರ ಸಂಘ ಫರಂಗಿಪೇಟೆ ವಲಯದ ಅಧ್ಯಕ್ಷರಾದ ಶ್ರೀ ಶಶಿರಾಜ್ ಶೆಟ್ಟಿ ಕೊಳಂಬೆಯವರು ಐದು ವಿವಿಧ ಜಾತಿ ವರ್ಗದ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಘೋಷಣೆ ಮತ್ತು ಆಶ್ವಾಸನಾ ಪತ್ರ ನೀಡಲಾಯಿತು.
ಮೇರಮಜಲು ಗ್ರಾಮದ ತೇವುಕಾಡು ಶ್ರೀಮತಿ ಬೇಬಿಪೂಜಾರಿ, ಅರ್ಕುಳ ಗ್ರಾಮದ ಶ್ರೀಮತಿ ಗೀತಾ ಸಪಲ್ಯ, ಕೊಡ್ಮಾಣ್ ಗ್ರಾಮದ ಸುಗುಣ ಶೆಟ್ಟಿ, ಮೇರಮಜಲು ಗ್ರಾಮದ ಶ್ರೀಮತಿ ಲಲಿತಾ ಬೆಲ್ಚಡ , ಕೊಡ್ಮಣ್ ಶ್ರೀಮತಿ ವಾರಿಜ ಶೆಟ್ಟಿಯವರಿಗೆ ಆಶ್ವಾಸನಾ ಪತ್ರ ವನ್ನು ವಿತರಿಸಲಾಯಿತು.
ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ನಗ್ರಿಗುಟ್ಟು ವಿವೇಕ್ ಶೆಟ್ಟಿಯವರು ಮಾತನಾಡಿ ಫರಂಗಿಪೇಟೆ ವಲಯ ಬಂಟರ ಸಂಘ ಜಿಲ್ಲೆಗೆ ಮಾದರಿಯಾಗುವಂತಹ ಕೆಲಸ ಮಾಡಿದೆ, ಸಮಾಜದ ಎಲ್ಲ ಜಾತೇ ವರ್ಗಗಳನ್ನೂ ಗುರುತಿಸಿ ಮನೆ ಕಟ್ಟಿಕೊಡುವುದು ಶ್ಲಾಘನೀಯವಾಗಿದೆ ಮತ್ತು ಸಮಾಜಕ್ಕೆ ಮಾದರಿಯಾಗಿದೆ.
ವೇದಿಕೆಯಲ್ಲಿ ಬಂಟರ ಮಾತೃ ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ, ಬಂಟ್ವಾಳ ಶಾಸಕರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್. ಮಂಗಳೂರು ಉತ್ತರ ಶಾಸಕರಾದ ಡಾ ವೈ ಭರತ್ ಶೆಟ್ಟಿ, ಪುತ್ತೂರು ಮಾಜಿ ಶಾಸಕಿ ಶ್ರೀಮತಿ ಶಕುಂತಲ ಶೆಟ್ಟಿ, ಉದ್ಯಮಿ ದಿನೇಶ್ ಟಿ ಶೆಟ್ಟಿ ಕೊಟ್ಟಿಂಜ, ಮಾತೃ ಸಂಘದ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ, ಗೌರವಾಧ್ಯಕ್ಷರಾದ ವಿಠ್ಠಲ್ ಶೆಟ್ಟಿ ನೀರೊಲ್ಬೆ, ಜಯರಾಂ ಸಾಮಾನಿ ತುಂಬೆ, ಪದಾಧಿಕಾರಿಗಳಾದ ಅರುಣ್ ಕುಮಾರ್ ಶೆಟ್ಟಿ ನುಲಿಯಾಳು ಗುತ್ತು, ಶೈಲಜಾ ಎಸ ಶೆಟ್ಟಿ ಕಲ್ಲತಡಮೆ, ಸುಕೇಶ್ ಶೆಟ್ಟಿ ತೇವು, ದೇವದಾಸ್ ಶೆಟ್ಟಿ ಕೊಡ್ಮಣ್, ಸಂತೋಷ್ ಗಾಂಭೀರ ಸುಜೀರು ಗುತ್ತು, ನಾಗರತ್ನ ರೈ ಕಲ್ಲತಡಮೆ, ಭುವನ್ ರೈ ಸುಜೀರು ಗುತ್ತು, ಶೈಲಜಾ ಪಿ ಶೆಟ್ಟಿ ಕೊಟ್ಟಿಂಜ, ಮಮತಾ ಶೆಟ್ಟಿ, ವಿಜಯ ಶೆಟ್ಟಿ ದೆಮುಂಡೆ ಮತ್ತಿತರರು ಉಪಸ್ಥಿತರಿದ್ದರು.