Rajesh Naik

ಸಹಕಾರ ಭಾರತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ: ಅತ್ಯಂತ ಯಶಸ್ವಿಯಾಗಿ ದ.ಕ.ಜಿಲ್ಲೆಯಲ್ಲಿ ಸಹಕಾರ ಸಂಘಗಳು ನಡೆಯುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಹೇಳಿದರು. ರೈತರಿಗೆ ಕೃಷಿ ಲಾಭದಾಯಕ, ಸಣ್ಣ ಹಿಡುವಳಿದಾರರು ಜಿಲ್ಲೆಯಲ್ಲಿ ಹೆಚ್ಚು ಇರುವುದರಿಂದ ಲಾಭ ಕಡಿಮೆ ಆಗುತ್ತಿದೆ. ಕೃಷಿಯನ್ನು ಯಾಂತ್ರೀಕೃತ ಉಪಕರಣಗಳನ್ನು ಉಪಯೋಗಿಸಿ ಮಾಡಿದರೆ ಕೃಷಿಕರು ಮತ್ತು ಕೃಷಿ ಉಳಿಯಬಹುದು.

ಸಹಕಾರ ಸಂಘಗಳ ಜೊತೆ ರೈತರನ್ನು ಸೇರಿಸಿ ಅವರಿಗೆ ಉಪಯುಕ್ತ ಮಾಹಿತಿ ತಂತ್ರಜ್ಞಾನ ಬಳಸುವ ಬಗ್ಗೆ ಮಾಡಿದರೆ ಈ ಜಿಲ್ಲೆಯನ್ನು ಸಂಪದ್ಬರಿತ ಜಿಲ್ಲೆಯನ್ನಾಗಿ ಮಾಡಬಹುದು ಎಂದು ಶಾಸಕ  ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಹೇಳಿದರು.  ಸಹಕಾರ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಆ ಮೂಲಕ ಜಿಲ್ಲೆಯ ಕೃಷಿಕ್ರಾಂತಿಯಾಗಲಿ ಎಂದು ಹೇಳಿದರು. ಅವರು ಬಿಸಿರೋಡ್ ರೋಟರಿ ಭವನದಲ್ಲಿ ನಡೆದ ಸಹಕಾರ ಭಾರತಿ ಬಂಟ್ವಾಳ ತಾಲೂಕಿನ ವತಿಯಿಂದ ಸಹಕಾರ ಸಂಘಗಳ  ಅಧ್ಯಕ್ಷ ರುಗಳಿಗೆ,  ಉಪಾಧ್ಯಕ್ಷ ರುಗಳಿಗೆ , ನಿರ್ದೇಶಕ ರುಗಳಿಗೆ ಹಾಗೂ ಕಾರ್ಯದರ್ಶಿ ಗಳಿಗೆ ಒಂದು ದಿನದ ಅಭ್ಯಾಸ ವರ್ಗ ವನ್ನು  ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಸಹಕಾರ ಸಂಘಗಳು ಮೂಲಕ ಸಹಕಾರ ತತ್ವದ ಮಾಹಿತಿಯನ್ನು  ಅಭ್ಯಾಸ ವರ್ಗದ ನೀಡಿ ಆ ಮೂಲಕ ಜ್ಞಾನ ವ್ರದ್ದಿಸುವ ಕೆಲಸ ಮಾಡುವುದು ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ನೂತನ ಶಾಸಕ ರಾಜೇಶ್ ನಾಯ್ಕ್ ಅವರನ್ನು ಸಹಕಾರ ಸಂಘದದ ವತಿಯಿಂದ ಸನ್ಮಾನಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಸಹಕಾರಿ ಭಾರತಿಯ ಅಧ್ಯಕ್ಷ ಜಯಶಂಕರ್ ಬಾಸ್ರಿತ್ತಾಯ ವಹಿಸಿದ್ದರು. ವೇದಿಕೆಯಲ್ಲಿ ಕ್ಯಾಂಪ್ಕೋ ಅದ್ಯಕ್ಷ ಎಸ್.ಅರ್ . ಸತೀಶ್ಚಂದ್ರ , ಜಿಲ್ಲಾ ಸಹಕಾರಿ ಭಾರತಿ ಅಧ್ಯಕ್ಷ ಉದಯ ರೈ ಮಾದೋಡಿ, ಸ್ಕ್ಯಾಡ್ಸ್ ನ ಅದ್ಯಕ್ಷ ಕೆ.ರವೀಂದ್ರ ಕಂಬಳಿ. ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ.ಜೆ.ರಾಜಾರಾಂ ಭಟ್, ರಾಷ್ಟ್ರೀಯ ಭಾರತಿಯ ಉಪಾಧ್ಯಕ್ಷ ಪದ್ಮನಾಭ ಕೊಂಕೊಡಿ, ಸಹಕಾರಿ ಭಾರತಿಯ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಕುಂಬ್ಳೆಕರ್, ಹಾಪ್ ಕಾಮ್ಸ್ ಅದ್ಯಕ್ಷ ಲಕ್ಮೀನಾರಯಣ ಉಡುಪ, ಸಹಕಾರಿ ಭಾರತಿಯ ಪ್ರಧಾನ ಕಾರ್ಯ ದರ್ಶಿ ಚಂದ್ರಶೇಖರ್ ತಾಳ್ತಾಜೆ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅದ್ಯಕ್ಷ ಜಿ.ಆನಂದ ಮತ್ತಿತರರು ಉಪಸ್ಥಿತರಿದ್ದರು.

ಉದ್ಘಾಟನೆಯ ಬಳಿಕ ಸಹಕಾರ ಭಾರತಿ ಪರಿಚಯ ಮತ್ತು ಕಾರ್ಯಕರ್ತ ಮತ್ತು ಕಾರ್ಯಪದ್ದತಿ ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನಡೆಯಿತು. ಸಹಕಾರ ಭಾರತಿಯ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಸ್ವಾಗತಿಸಿದರು. ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ವಂದಿಸಿದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

sahakara-bharati-2

sahakara-bharati-3

sahakara-bharati-1

Back To Top
Highslide for Wordpress Plugin