ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಗ್ರಾಮದ ಹೊಸಮಾರು ಎಂಬಲ್ಲಿ ಹೊಸಮಾರು ಹಾಗೂ ಬಡ್ಡಕಟ್ಟೆ ಪೇಟೆಯನ್ನು ಸಂಪರ್ಕಿಸುವ ಕಿರುಸೇತುವೆ ಕಳೆದ ಎರಡು ದಿನಗಳಿಂದ ಸುರಿದ ಧಾರಕಾರ ಮಳೆಗೆ ಕುಸಿದ್ದು ಬಿದ್ದಿದ್ದು ಪರಿಸರದ ನಾಗರಿಕರಿಗೆ ಪೇಟೆಯ ಸಂಪರ್ಕ ಕಡಿದು ಬಿದ್ದಂತಾಗಿದೆ. ಸ್ಥಳೀಯ ನಾಗರಿಕರ ಮನವಿ ಮೇರೆಗೆ ಮಾನ್ಯ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸ್ಥಳಕ್ಕೆ ಬೇಟಿಕೊಟ್ಟು ಸೇತುವೆಯ ಪರಿಶೀಲನೆ ಮಾಡಿದರು ಸ್ಥಳದಲ್ಲೆ ಪುರಸಭಾ ಅಧಿಕಾರಿಗಳು ಹಾಗೂ ಸಣ್ಣ ನೀರಾವರಿಯ ಇಂಜಿನಿಯರಿಗೆ ಕರೆಮಾಡಿ ತಕ್ಷಣ ಸೇತುವೆ ದುರಸ್ಥಿಮಾಡಿ ಸಂಚಾರಕ್ಕೆ ಅನುವು ಮಾಡುವಂತೆ ಆದೇಶಿಸಿದರು. ಶಾಸಕರೊಂದಿಗೆ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಪ್ರಮುಖರಾದ ದಿನೇಶ್ ಭಂಡಾರಿ, ಸೋಮಪ್ಪ ಪೂಜಾರಿ, ಲಿಂಗಪ್ಪ ಪೂಜಾರಿ, ಬೂತ್ ಅಧ್ಯಕ್ಷ ಚಂದ್ರಹಾಸ ಪೂಜಾರಿ, ಸಂತೋಷ್ ಶೆಟ್ಟಿ, ನಾರಾಯಣ ಕುಲಾಲ್, ಗೋಪಾಲಕೃಷ್ಣ ದೇವಾಡಿಗ, ರಾಜೇಶ್ ಭಂಡಾರಿ, ಜಗದೀಶ್ ಪೂಜಾರಿ, ಯೊಗೀಶ್ ಪೂಜಾರಿ, ಜಯ ಪೂಜಾರಿ, ಯಶವಂತ ಕುಲಾಲ್ ಮುತಾಂದವರು ಉಪಸ್ಥಿತರಿದ್ದರು ಸಣ್ಣ ನೀರಾವರಿಯ ಇಂಜಿನೀಯರ್ ಶಿವಪ್ರಸನ್ನರವರು ಸ್ಥಳ ತನಿಖೆ ನಡೆಸಿ ಶಾಸಕರಿಗೆ ವರದಿ ನೀಡಿರುತ್ತಾರೆ.