ಕೊಳ್ನಾಡು ಬಿಜೆಪಿ ಗ್ರಾಮ ಪಂಚಾಯತ್ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭ ವಿಜಯಶ್ರೀ ಕಲ್ಯಾಣ ಮಂಟಪದಲ್ಲಿ ಜರಗಿತು. ಸಮಾರಂಭದಲ್ಲಿ ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ ದಿಕ್ಸೂಚಿ ಭಾಷಣ ಮಾಡಿ ಅಹಂಕಾರ, ಅಸೂಯೆ, ಮತ್ಸರಗಳಿಂದ ಸಮಾಜವನ್ನು ಸರ್ವಸ್ವವನ್ನು ಕಳೆದುಕೊಳ್ಳುತ್ತದೆ ಬಂಟ್ವಾಳದಲ್ಲಿ ರಮಾನಾಥ ರೈ ಸೋತಿರುವುದು. ಉದಾಹರಣೆ ದೋಷದಿಂದಲ್ಲ ಬದಲಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ೩,೫೦೦ ವಿದ್ಯಾರ್ಥಿಗಳ ಊಟ ನಿಲ್ಲಿಸಿದ ದೋಷ, ಹಿರಿಯರಾದ ಜರ್ನಾಧನ ಪೂಜಾರಿಯವರನ್ನು ನಿಂದಿಸಿ ಕಣ್ಣಲ್ಲಿ ನೀರು ಭರಿಸಿದ ದೋಷ ಮುಂತಾದ ಕೆಲವು ದೋಷಗಳಿಂದ ಎಂದು ಮಾರ್ಮಿಕವಾಗಿ ನುಡಿದರು.
ಆ ಬಳಿಕ ನೂತನ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಇವರಿಗೆ ಬೃಹತ್ ಹಾರ, ಸ್ಮರಣಿಕೆ, ಮೈಸೂರು ಪೇಟ, ಶಾಲು, ಹಾರಾರ್ಪಣೆ ಗೈದು ಸನ್ಮಾನಿಸಲಾಯಿತು. ಈ ವೇದಿಕೆಯನ್ನು ವಿವಿಧ ಸಂಸ್ಥೆಗಳಾದ ಶ್ರೀ ಮಾರಿಯಮ್ಮ ಯುವಕ ಸಂಘ ಸೆರ್ಕಳ, ವಿಶ್ವ ಹಿಂದೂ ಪರಿಷತ್ ಭಜರಂಗದಳ, ಹಳೆ ವಿದ್ಯಾರ್ಥಿ ಯುವಕ ಸಂಘ, ಶಿವಾಜಿ ಫ್ರೆಂಡ್ಸ್ ಮಂಕುಡೆ, ವಿನಯಶ್ರೀ ಯುವಕ ಮಂಡಲ ಕುಡ್ತಮುಗೇರು, ವನಬಿಂದು ಫ್ರೆಂಡ್ಸ್ ತಾಳಿತ್ತನೂಜಿ, ಸಹೋದರ ಯುವಕ ಸಂಘ ಬಾರೆಬೆಟ್ಟು, ಗೋಪಾಲಕೃಷ್ಣ ಸೇವಾ ಸಂಘ ಕಟ್ಟತ್ತಿಲು, ಶ್ರೀದೇವಿ ಕಾಡುಮಠ, ಸಾರ್ವಜನಿಕ ಗೌರವಾರ್ಪಣೆ ನಡೆಯಿತು.
ಅನಂತರ ಮಾತನಾಡಿದ ಶಾಸಕರು ಜನರ ಪ್ರೀತಿ ವಿಶ್ವಾಸಗಳನ್ನು ಕಂಡು ಹೃದಯ ತುಂಬಿ ಬರುತ್ತದೆ ಜನರ ಪ್ರೀತಿ ವಿಶ್ವಾಸವನ್ನು ಉಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಿರಂತರ ಸಂರ್ಪಕದಿಂದ ಕ್ಷೇತ್ರದ ಅಭಿವೃದ್ದಿಯೊಂದಿಗೆ ನೆಮ್ಮದಿಯ, ಶಾಂತಿ ಸಮೃದ್ದಿಯ ಬಂಟ್ವಾಳ ನಿರ್ಮಾಣ ಮಾಡುತ್ತೆನೆ. ಜೊತೆಗೆ ರಾಜ ಧರ್ಮ ಪಾಲನೆ ನನ್ನ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದ ಆಧ್ಯಕ್ಷತೆಯಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ ವಹಿಸಿಕೊಂಡು ಕೊಳ್ನಾಡು ಗ್ರಾಮದ ಬಿಜೆಪಿ ನಾಗಾಲೋಟದಿಂದ ಬೆಳೆಯುತ್ತಿದ್ದ, ಶಿಸ್ತಿನ ಕಾರ್ಯಕರ್ತರ ತಂಡ, ಗ್ರಾಮ ಸಮಿತಿ ತಂಡ ಪರಿಣಾಮಕಾರಿಯಾಗಿ ಪಕ್ಷದ ಚಟುವಟಿಕೆ ನಡೆಸಿದ್ದು ಅಭಿನಂದನೀಯ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ, ಜಿಲ್ಲಾ ಎಸ್ ಸಿ ಮೊರ್ಚಾ ಅಧ್ಯಕ್ಷರಾದ ದಿನೇಶ್ ಅಮ್ಟೂರು, ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಮಹಮ್ಮದ್ ಮುಸ್ತಾಫ, ತಾಲೂಕು ಪಂಚಾಯತ್ ಸದಸ್ಯರಾದ ಕುಲ್ಯಾರು ನಾರಾಯಣ ಶೆಟ್ಟಿ, ಮಾಣಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಅಭಿಷೇಕ್ ರೈ, ವಿಟ್ಲಪಡ್ನೂರು ಪಂಚಾಯತ್ ಅಧ್ಯಕ್ಷರಾದ ರವೀಶ್ ಶೆಟ್ಟಿ, ಕ್ಷೇತ್ರದ ಎಸ್ ಟಿ ಮೋರ್ಚಾದ ಜಯರಾಮ ಕುಂಟ್ರಕಳ, ತಾಲೂಕು ಯುವ ಮೋರ್ಚಾದ ಲೋಹಿತ್ ಅಗರಿ, ಪಂಚಾಯತ್ ಸದಸ್ಯರಾದ ಹರೀಶ್ ಟೈಲರ್ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮ ಸಮಿತಿ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಪ್ರಸ್ತಾದಿಸಿ ಸ್ವಾಗತಿಸಿದರು ಶಶಿಧರ ರೈ, ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವೇಣುಗೋಪಾಲ ವಂದಿಸಿದರು, ಪಂಚಾಯತ್ ಸದಸ್ಯ ಶ್ರೀಮತಿ ರೇಣುಕಾ ಪ್ರಾರ್ಥನೆ ನೆರವೇರಿಸಿದರು.