Rajesh Naik

11ನೇ ದಿನಕ್ಕೆ ಕಾಲಿರಿಸಿದ ಪರಿವರ್ತನೆಗೆ ನಮ್ಮ ನಡಿಗೆ

ಬಂಟ್ವಾಳ ಬಿಜೆಪಿ ನೇತೃತ್ವದ ರಾಜೇಶ್ ನಾಯ್ಕ್ ಸಾರಥ್ಯದಲ್ಲಿ ಬಂಟ್ವಾಳದ ಪರಿವರ್ತನೆಗೆ ನಮ್ಮ ನಡಿಗೆ 11ನೇ ದಿನಕ್ಕೆ ಕಾಲಿರಿಸಿದೆ ಮಂಗಳವಾರ ಸಂಜೆ ಬೊಳ್ಳಾಯಿಯಲ್ಲಿ ನಡೆದ ಸಾರ್ವಜನಿಕ ಸಭೆಯ ಬಳಿಕ ಕಳ್ಳಿಗೆ ಗ್ರಾಮದ ಬೆಂಜನಪದವಿನ ಶರತ್ ಮನೆಯಲ್ಲಿ ವಾಸ್ತವ್ಯ ಹೂಡಿದರು. ಬಳಿಕ ಬೆಳಿಗ್ಗೆ 08.00ಗಂಟೆಗೆ ಬೆಂಜನಪದವಿನಲ್ಲಿ ವಂದೇಮಾತರಂ ಗೀತೆಯೊಂದಿಗೆ ಪಾದಯಾತ್ರೆ ಪ್ರಾರಂಭವಾಯಿತು, ಶ್ರೀರಾಮ ನಗರದಲ್ಲಿ ಕಳ್ಳಿಗೆ ಗ್ರಾ.ಪಂ ಉಪಾಧ್ಯಕ್ಷ ಪುರುಷ ಸಾಲ್ಯಾನ್, ಬಿಜೆಪಿ ಅಧ್ಯಕ್ಷರಾದ ದೇವಿಪ್ರಸಾದ್ ಕಳ್ಳಿಗೆ, ಮನೋಹರ್ ಕಂಜತ್ತೂರು ಮತ್ತು ಅಪಾರ ಸಂಖ್ಯೆಯಲ್ಲಿ ಕಳ್ಳಿಗೆಯ ಕಾರ್‍ಯಕರ್ತರು ಸ್ವಾಗತಿಸಿ ಪಾದಯಾತ್ರೆಯೊಂದಿಗೆ ಹೆಜ್ಜೆಹಾಕಿದರು.ಬಳಿಕ ಅಮ್ಮುಂಜೆ ಗ್ರಾಮದ ಬೆಂಜನಪದವಿನ ಶಿವಾಜಿನಗರದಲ್ಲಿ ಅಮ್ಮುಂಜೆ ಗ್ರಾ.ಪಂ ಉಪಾಧ್ಯಕ್ಷರಾದ ವಾಮನ ಆಚಾರ್ಯ, ಬಿಜೆಪಿ ಅಧ್ಯಕ್ಷರಾದ ಜನಾರ್ಧನ ಬಾರಿಂಜೆ, ಸುರೇಶ್ ಬಿ ಸಾಲ್ಯಾನ್‌ರವರ ನೇತೃತ್ವದ ಅಮ್ಮುಂಜೆ ಬಿಜೆಪಿ ಕಾರ್ಯಕರ್ತರ ತಂಡ ಪಾದಯಾತ್ರೆಯ ರುವಾರಿ ರಾಜೇಶ್ ನಾಯ್ಕ್ರವರಿಗೆ ಪೇಟ ತೊಡಿಸಿ ಶಾಲು ಹಾರ ಹಾಕಿ ಸ್ವಾಗತಿಸಿದರು ಬಳಿಕ ಪಾದಯಾತ್ರೆಯು ಕಲಾಯಿಗೆ ಸಾಗಿ ಅಮ್ಮುಂಜೆ ವಿನಾಯಕ ಜನಾರ್ಧನ ದೇವಸ್ಥಾನಕ್ಕೆ ಆಗಮಿಸಿ ದೇಗುಲದಲ್ಲಿ ದೇವರ ದರ್ಶನ ಪಡೆದರು. ದೇವಸ್ಥಾನದಲ್ಲಿ ಮದ್ಯಾಹ್ನದ ಭೋಜನ ಸ್ವೀಕರಿಸಿ ದೇಗುಲದ ವಠಾರದಲ್ಲಿ ವಿಶ್ರಾಂತಿ ಪಡೆದ ಬಳಿಕ ಪಾದಯಾತ್ರೆಯು ಕರಿಯಂಗಳ ಗ್ರಾಮದೆಡೆಗೆ ಸಾಗಿತು.

ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ ,ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿ.ಪಂ ಸದಸ್ಯರಾದ ಕಮಾಲಕ್ಷಿ ಪೂಜಾರಿ, ತುಂಗಪ್ಪ ಬಂಗೇರಾ, ತಾ.ಪಂ ಸದಸ್ಯರಾದ ಯಶವಂತ ಪೊಳಲಿ, ಮಾಜಿ ಜಿ.ಪಂ ಸದಸ್ಯೆ ನಳಿನಿ.ಬಿ ಶೆಟ್ಟಿ ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ, ಮಾಜಿ ಪುರಸಭಾ ಅಧ್ಯಕ್ಷರಾದ ದಿನೇಶ್ ಭಂಡಾರಿ, ಕಾರ್ಯದರ್ಶಿಗಳಾದ ಸೀತರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಹಿಂದುಳಿವರ್ಗದ ಮೋರ್ಚಾದ ವಸಂತ ಅಣ್ಣಳಿಕೆ, ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷರಾದ ದಿನೇಶ್ ಅಮ್ಟೂರು, ಜಿಲ್ಲಾ ಸಮಿತಿ ಸದಸ್ಯರಾದ ರೋನಾಲ್ಡ್ ಡಿ ಸೋಜಾ, ರೈತಮೋರ್ಚಾದ ತನಿಯಪ್ಪ ಗೌಡ, ಪುರುಷೋತ್ತಮ ಶೆಟ್ಟಿ ವಾಮದಪವು, ಪಿ.ಎಸ್.ಮೋಹನ್, ಎಸ್.ಸಿ ಮೊರ್ಚಾದ ಮನೋಹರ್, ಯುವಮೋರ್ಚಾದ ವಜ್ರನಾಥ ಕಲ್ಲಡ್ಕ, ಸಂತೋಷ್ ರಾಯಿಬೆಟ್ಟು, ಸುದರ್ಶನ್ ಬಜ, ದಿನೇಶ್ ಶೆಟ್ಟಿ ದಂಬೆದಾರು, ಸುರೇಶ್ ಕೋಟ್ಯಾನ್, ಸಂಪತ್ ಕೋಟ್ಯಾನ್, ಕಾರ್ತಿಕ್ ಬಳ್ಳಾಲ್, ಲೋಕೇಶ್ ಭರಣಿ, ಸುಕೇಶ್ ಚೌಟ , ವಿನೀತ್ ಪೆರಾಜೆ, ಊರಿನ ಹಿರಿಯರುಗಳಾದ ಸೀನ ಶೆಟ್ಟಿ,ವಿನೋದ್ ನಾಯ್ಕ್, ಪ್ರದೀಪ್ ಬಳ್ಳಾಲ್, ಸಂಪತ್ ಕುಮಾರ್ ಶೆಟ್ಟಿ, ಸೋಮಶೇಖರ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಮಹೇಶ್ ಚಂದ್ರಿಗೆ, ರೊನಾಲ್ಡ್ ಡಿಸೋಜ, ವಿಮಲ,ಕೇಶವ, ಯಶೋದ, ರೇವತಿ, ರೋಹಿಣಿ, ಶೀನ ಬೆಳ್ಚಡ, ಸುಂದರಿ, ಪಕ್ಷದ ಪ್ರಮುಖರಾದ ಪ್ರಶಾಂತ್ ಕೊಟ್ಟಾರಿ, ಆದಂ ಕಲಾಯಿ, ಗೋಪಾಲ, ಮನೋಜ್ ಕಳ್ಳಿಗೆ, ಸಂದೀಪ್, ಶರ್ಮಿಳಾ, ದಾಮೋದರ ನೆತ್ತರಕೆರೆ, ಸಂಜೀವ ಬೆಂಜನಪದವು, ರವೀಂದ್ರ ಸುವರ್ಣ, ಪ್ರಕಾಶ್ ಬಡಗಬೆಳ್ಳೂರು, ನಂದರಾಮ ರೈ ಮತ್ತಿತರರು ಉಪಸ್ಥಿತರಿದ್ದರು.

benjana-padavu-2

benjana-padavu-1

Back To Top
Highslide for Wordpress Plugin