ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸರಪಾಡಿ ಗ್ರಾಮ ಪಂಚಾಯತ್‌ನ ಬಿಯಪಾದೆಯಲ್ಲಿ ಸುಮಾರು 18 ಜನ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರು ಹಿಂದುತ್ವ ವಿರೋಧಿ ಕಾಂಗ್ರೆಸ್ ಸರಕಾರದ ನಡೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಸಂದೀಪ್ ಪೂಜಾರಿ ಎಕ್ಕುಡೇಲು, ವಿನೋದ್ ನಾಯ್ಕ ಪೆರ್ಲ, ದೇವಯ್ಯ ಪೂಜಾರಿ ಬಿಯಪಾದೆ, ಶರತ್ ಪೂಜಾರಿ ಎಕ್ಕುಡೇಲು, ಸೋಮಶೇಖರ್ ಗೌಡ ಕುದ್ದುಂಜ, ದಲಿತ ಮುಖಂಡ ಶೀನ ಪೆರ್ಲ, ಸಿದ್ದು ಪೆರ್ಲ, ನಿತೀಶ್ ಪೆರ್ಲ, ಜಯಂತಿ ನಾಯಕ್, ವಿಜಯ ತಿರ್ಕೊಟ್ಟು, ರುಕ್ಮಿಣಿ ಪೆರ್ಲ ಇವರು ಪ್ರಗತಿಪರ ಕೃಷಿಕ ರೈತ ನಾಯಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಸಮ್ಮುಖದಲ್ಲಿ ಬಿಜೆಪಿಯ ಧ್ವಜ ಹಿಡಿದು ಬಿಜೆಪಿಯ ಗೆಲುವಿಗಾಗಿ ಮುಂದಿನ ಚುನಾವಣೆಯಲ್ಲಿ ಪರಿಶ್ರಮಿಸುವ ಸಮರ್ಪಣಾ ಭಾವದಿಂದ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.
ಉಳಿಪ್ಪಾಡಿ ರಾಜೇಶ್ ನಾಯ್ಕ್ ಅವರು ಮಾತನಾಡಿ ಮೋದಿಯವರ ಅಭಿವೃದ್ಧಿ ನೀತಿಯನ್ನು ಬೆಂಬಲಿಸಿ ಈ ವರ್ಷದಲ್ಲಿ ಪರಿವರ್ತನಾ ಕ್ರಾಂತಿಯನ್ನು ಮೊಳಗಿಸೋಣ ಎಂದರು. ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ್ ಶೆಟ್ಟಿಯವರು ಮಾತನಾಡಿ ಸಂಘಟನಾತ್ಮಕ ಪ್ರಯತ್ನದಿಂದ ನಾವೆಲ್ಲರೂ ಜೊತೆ ಸೇರಿ ಪಕ್ಷ ಗೆಲ್ಲಿಸೋಣ ಎಂದರು. ಈ ಸಂಧರ್ಭದಲ್ಲಿ ಬಿ.ಜೆ.ಪಿ ಕ್ಷೇತ್ರ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ, ಸರಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಧರ್ಣಪ್ಪ ಪೂಜಾರಿ, ಪಂಚಾಯತ್ ಸದಸ್ಯರಾದ ಧನಂಜಯ ಶೆಟ್ಟಿ, ನಾಣ್ಯಪ್ಪ ಪೂಜಾರಿ ಬೆಳ್ಳೂರು, ಸರಪಾಡಿ ಶಕ್ತಿಕೇಂದ್ರದ ಅಧ್ಯಕ್ಷರಾದ ಶಶಿಕಾಂತ್ ಶೆಟ್ಟಿ, ಕಾರ್ಯದರ್ಶಿ ಶಿವಪ್ಪ ಗೌಡ, ಪಕ್ಷದ ಪ್ರಮುಖರಾದ ರಾಮಕೃಷ್ಣ ಮಯ್ಯ, ವಿಠಲ ಕೋಟ್ಯಾನ್, ದಯಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಗಳಾದ ಸುದರ್ಶನ್ ಬಜ ಕಾರ್ಯಕ್ರಮ ನಿರೂಪಿಸಿದರು.