Rajesh Naik

ಅರಳ ಗ್ರಾ.ಪಂ: ಉಜ್ವಲ ಯೋಜನೆಯಡಿ ಫಲಾನುಭವಿಗಳ ವಿತರಣಾ ಕಾರ್ಯಕ್ರಮ

ನರೇಂದ್ರ ಮೋದಿಯ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿಯಲ್ಲಿ ಅರಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಮತ್ತು ಸ್ಟವ್ ವಿತರಣಾ ಕಾರ್ಯಕ್ರಮವು ಅರಳ ನವಶಕ್ತಿ ಯುವಕ ಮಂಡಲದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಶ್ರೀ ರಾಜೇಶ್ ನಾಯ್ಕ್ ಅವರು ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ಪಂಚಾಯತ್ ಸದಸ್ಯರು ಮತ್ತು ಕಾರ್ಯಕರ್ತರ ಜವಾಬ್ದಾರಿ. ಸಂಸದ ನಳಿನ್ ಕುಮಾರ್ ಕಟೀಲ್‌ರವರು ಕೇಂದ್ರ ಸರಕಾರದ ಬಹಳಷ್ಟು ಯೋಜನೆಗಳನ್ನು ನಮ್ಮ ಜಿಲ್ಲೆಗೆ ತಂದಿದ್ದಾರೆ. ಬಂಟ್ವಾಳ ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಳಿನ್ ಕುಮಾರ್ ಕಟೀಲ್‌ರವರ ನೇತೃತ್ವದಲ್ಲಿ ಕೇಂದ್ರ ಸರಕಾರದ ಯೋಜನೆಗಳ ಕಾರ್ಯಗಾರವನ್ನು ಗ್ರಾಮ ಮಟ್ಟದಲ್ಲಿ ಮಾಡಿ ಯೋಜನೆಗಳ ಪ್ರಯೋಜನೆಗಳನ್ನು ಬಂಟ್ವಾಳ ಕ್ಷೇತ್ರದ ಜನತೆ ಪಡೆಯುವಂತ ನಿಟ್ಟಿನಲ್ಲಿ ಕಾರ್ಯಕ್ರವನ್ನು ರೂಪಿಸಲಾಗುವುದು. ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಗ್ಯಾಸ್ ಮತ್ತು ಸ್ಟವ್‌ವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ತುಂಗಮ್ಮ, ಉಪಾಧ್ಯಕ್ಷರಾದ ಜಗದೀಶ್ ಆಳ್ವ ಅಗ್ಗೊಂಡೆ, ಮಾಜಿ ಅಧ್ಯಕ್ಷರು ಹಾಗೂ ಪಂಚಾಯತ್ ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ ಮಧ್ಯಾಳ, ಪಂಚಾಯತ್ ಸದಸ್ಯರಾದ ಲಕ್ಷ್ಮೀಧರ ಪೂಜಾರಿ ಸಂಗಬೆಟ್ಟು, ಕಾರಿಂಜೇಶ್ವರ ಗ್ಯಾಸ್ ಏಜೇನ್ಸಿಯ ಮಾಲಕರು ಕರುಣಾಕರ ಶೆಟ್ಟಿ, ಪಕ್ಷದ ಪ್ರಮುಖರಾದ ರಮನಾಥ ರಾಯಿ, ಗಣೇಶ್ ರೈ ಮಾಣಿ, ಉಮೇಶ್ ಡಿ.ಎಂ, ಯೋಗೀಶ್ ಕೆ, ಅಶ್ವಥ್, ಹೇಮಂತ್ ಅರಳ, ತಿಮ್ಮಪ್ಪ ಬಿ, ಆನಂದ ಮೇಲಾಂಟ, ಶ್ರೀಧರ ಆಚಾರ್ಯ, ಪ್ರಸನ್ನ ಕುಮಾರ್ ಶೆಟ್ಟಿ, ಇತರ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯರಾದ ಡೊಂಬಯ್ಯ ಅರಳ ನಿರೂಪಿಸಿದರು.

Arala-Ujjwal-yojana

Back To Top
Highslide for Wordpress Plugin